HomeCrimeಮಹಿಳೆ ಸರ ಕಿತ್ತುಕೊಂಡ ಕಳ್ಳ ಚಲಿಸುತ್ತಿದ್ದ ರೈಲಿನಿಂದ ಹಾರಿ ಪರಾರಿ; ಸಿಸಿ ಟಿವಿ ವಿಡಿಯೋ ವೈರಲ್

ಮಹಿಳೆ ಸರ ಕಿತ್ತುಕೊಂಡ ಕಳ್ಳ ಚಲಿಸುತ್ತಿದ್ದ ರೈಲಿನಿಂದ ಹಾರಿ ಪರಾರಿ; ಸಿಸಿ ಟಿವಿ ವಿಡಿಯೋ ವೈರಲ್

ಚೆನ್ನೈ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಕಳ್ಳನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚೆನ್ನೈನ ತಿರುಮುಲ್ಲೈವಾಯಲ್ ಪ್ರದೇಶದ ವಲರ್ಮತಿ (43) ಎಂದು ಗುರುತಿಸಲಾದ ಮಹಿಳಾ ಪ್ರಯಾಣಿಕರಿಂದ ಚಿನ್ನದ ಸರವನ್ನು ಕಿತ್ತುಕೊಂಡು ಕಳ್ಳ ಚಲಿಸುವ ರೈಲಿನಿಂದ ಫ್ಲಾಟ್ ಫಾರ್ಮ್ ಮೇಲೆ ಧುಮುಕಿ ಓಡುತ್ತಿರುವ ಸಿಸಿ ಕ್ಯಾಮೆರಾ ದೃಶ್ಯ ಕಾಣಿಸಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಲರ್ಮತಿ ಅವರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆ ಚೆನ್ನೈ ಸೆಂಟ್ರಲ್ ನಿಂದ ತಿರುವಳ್ಳೂರು ಕಡೆಗೆ ಎಲೆಕ್ಟ್ರಿಕ್ ರೈಲನ್ನು ಹತ್ತಿದ್ದರು.

ರೈಲು ಬೇಸಿನ್ ಬ್ರಿಡ್ಜ್ ನಿಲ್ದಾಣದಲ್ಲಿ ನಿಂತು ಕೆಲವು ಸೆಕೆಂಡುಗಳ ನಂತರ ಹೊರಟಾಗ ಹಿಂಬದಿಯಲ್ಲಿ ನಿಂತಿದ್ದ ಯುವಕ ಆಕೆಯ ಸರವನ್ನು ಕಿತ್ತುಕೊಂಡು ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ.

ಆಕೆಯ ದೂರಿನ ಆಧಾರದ ಮೇಲೆ ಬೇಸಿನ್ ಬ್ರಿಡ್ಜ್ ರೈಲ್ವೇ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular