WATCH: ರಸ್ತೆಯಲ್ಲೇ ಪ್ಯಾಂಟ್ ತೆಗೆದು ರಿಕ್ಷಾ ಚಾಲಕನಿಗೆ ಥಳಿಸಿದ ಟ್ರಾನ್ಸ್ ಜೆಂಡರ್ ಮಹಿಳೆ: ವಿಡಿಯೋ ವೈರಲ್

ನವದೆಹಲಿ: ಟ್ರಾನ್ಸ್ ಜೆಂಡರ್ ಮಹಿಳೆ ಮತ್ತು ರಿಕ್ಷಾ ಚಾಲಕನ ನಡುವಿನ ಕಾದಾಟ ಒಳಗೊಂಡ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಕಿಕ್ಕಿರಿದ ರಸ್ತೆಯ ಮಧ್ಯದಲ್ಲಿ ಇಬ್ಬರ ನಡುವೆ ಹೊಡೆದಾಟ, ಹನ್ನೆರಡು ಮಂದಿ ಮೂಕ ಪ್ರೇಕ್ಷಕರಾಗಿರುವುದನ್ನು ಕಾಣಬಹುದಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರಿಂದ X(ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ವೈರಲ್ ಕ್ಲಿಪ್ ನಲ್ಲಿ ಕಿತ್ತಳೆ ಬಣ್ಣದ ಟೀ ಶರ್ಟ್ ಧರಿಸಿದ್ದ ಮಹಿಳೆ ಎಲೆಕ್ಟ್ರಿಕ್ ರಿಕ್ಷಾ ರೈಡ್‌ ದರದ ವಿಚಾರವಾಗಿ ಚಾಲಕನ ಮೇಲೆ ಆಕ್ರಮಣ ಮಾಡುತ್ತಾಳೆ. ಚಾಲಕನೂ ಆಕೆಯ ಮೇಲೆ ಕೈ ಮಾಡುತ್ತಾನೆ.

ಮಹಿಳೆ ಚಾಲಕನನ್ನು ಅವನ ರಿಕ್ಷಾದಿಂದ ಹೊರಗೆ ಎಳೆದುಕೊಂಡು ಅವನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಳೆ. ಅವನು ಕೂಡ ಪ್ರತಿರೋಧ ತೋರಿದಾಗ ಟ್ರಾನ್ಸ್ ಜೆಂಡರ್ ಮಹಿಳೆ ಅನಿರೀಕ್ಷಿತವಾಗಿ ತನ್ನ ಪ್ಯಾಂಟ್ ಅನ್ನು ತನ್ನ ಮೊಣಕಾಲುಗಳವರೆಗೆ ಎಳೆದುಕೊಂಡು ಹಲ್ಲೆ ಮಾಡುತ್ತಾಳೆ. ಅವಳು ರಿಕ್ಷಾ ಚಾಲಕನ ಮೇಲೆ ಸಾರ್ವಜನಿಕವಾಗಿ ಹಲವಾರು ಬಾರಿ ಗುದ್ದುವುದು, ಕಪಾಳಮೋಕ್ಷ ಮತ್ತು ಒದೆಯುವ ಮೂಲಕ ಕ್ರೂರವಾಗಿ ಹಲ್ಲೆ ನಡೆಸುವುದನ್ನು ವಿಡಿಯೋ ಒಳಗೊಂಡಿದೆ.

ನೆಟಿಜನ್‌ ಗಳ ಪ್ರತಿಕ್ರಿಯೆ

ಘಟನೆಯ ನಿಖರವಾದ ದಿನಾಂಕ, ಸಮಯ ಮತ್ತು ಸ್ಥಳವು ಇನ್ನೂ ತಿಳಿದಿಲ್ಲವಾದರೂ, ವೈರಲ್ ವೀಡಿಯೊದ ಬಗ್ಗೆ ನೆಟಿಜನ್‌ಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ, ಆಕೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

https://twitter.com/vnyadav281963/status/1808892016681476518

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read