ಕೊನೆ ಕ್ಷಣದಲ್ಲಿ ಕಾರಿನಿಂದ ಹಾರಿ ಪ್ರಾಣ ಉಳಿಸಿಕೊಂಡ ಚಾಲಕ; ಎದೆ ನಡುಗಿಸುವ ವಿಡಿಯೋ ವೈರಲ್

ಜಮ್ಮು ಮತ್ತು ಕಾಶ್ಮೀರದಲ್ಲಿ ಕಡಿದಾದ ಪರ್ವತ ರಸ್ತೆಯನ್ನು ಏರಲು ಪ್ರಯತ್ನಿಸುವಾಗ ಕಾರ್ ಉರುಳಿಬಿದ್ದಿದೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಚಾಲಕ ಕಾರ್ ನಿಂದ ಹಾರಿ ಕೆಳಗೆ ಬಿದ್ದಿದ್ದಾನೆ.‌ ಎದೆ ನಡುಗಿಸುವ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.

ವೈರಲ್ ವಿಡಿಯೋದಲ್ಲಿ ಜಮ್ಮು ಮತ್ತು ಕಾಶ್ಮೀರದ ಪರ್ವತ ರಸ್ತೆಯ ಮನೆಯೊಂದರ ಪಕ್ಕದಲ್ಲಿ ಟಾಟಾ ಪಂಚ್ ಕಾರ್ ನಿಂತಿದ್ದು ಚಾಲಕನು ಅದನ್ನು ಎತ್ತರದ ರಸ್ತೆ ಮಟ್ಟಕ್ಕೆ ಚಲಾಯಿಸಲು ಪ್ರಯತ್ನಿಸಿದ್ದಾನೆ. ಇದಕ್ಕಾಗಿ ಕಾರ್ ತಳ್ಳಲು ಹಲವರು ಸಹಾಯ ಮಾಡಿದ್ದಾರೆ. ಆದರೆ ಪ್ರಯತ್ನಗಳ ಹೊರತಾಗಿಯೂ ಕಾರ್ ಕಡಿದಾದ ಜಾಗದಿಂದ ಮೇಲೇರಲು ವಿಫಲವಾಯಿತು.

ಟಾಟಾ ಪಂಚ್ ಅನಿಯಂತ್ರಿತವಾಗಿ ಹಿಂದಕ್ಕೆ ಉರುಳಲು ಪ್ರಾರಂಭಿಸಿತು. ವಾಹನವನ್ನು ನಿಲ್ಲಿಸುವ ಹತಾಶ ಪ್ರಯತ್ನದಲ್ಲಿ, ಚಾಲಕನು ನಿಯಂತ್ರಣ ಕಳೆದುಕೊಂಡು ಇಳಿಜಾರಿನಲ್ಲಿ ಕಾರ್ ಉರುಳುತ್ತಿದ್ದಂತೆ ಕಾರ್ ಡೋರ್ ತೆಗೆದು ಧೈರ್ಯದಿಂದ ಹೊರಗೆ ಜಿಗಿಯುತ್ತಾನೆ.

ಅದೃಷ್ಟವಶಾತ್ ಅವನು ಪ್ರಾಣ ಉಳಿಸಿಕೊಂಡಿದ್ದು ಕಾರ್ ಪಲ್ಟಿ ಹೊಡೆಯುತ್ತಾ ಪ್ರಪಾತಕ್ಕೆ ಉರುಳಿ ಬೀಳುತ್ತದೆ. ಈ ಘಟನೆಯು ಪರ್ವತ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವ ಅಪಾಯಗಳನ್ನು ಎತ್ತಿ ತೋರಿಸುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸವಾರರ ಸುರಕ್ಷತೆಗೆ ಆದ್ಯತೆ ನೀಡಲು ಗಮನ ಸೆಳೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read