HomeIndiaರೈಲ್ವೆ ಹಳಿಯಲ್ಲಿ ಸಿಲುಕಿದ್ದ ಶ್ವಾನಕ್ಕೆ ಜೀವದಾನ : ವೈರಲ್​ ಆಯ್ತು ವಿಡಿಯೋ

ರೈಲ್ವೆ ಹಳಿಯಲ್ಲಿ ಸಿಲುಕಿದ್ದ ಶ್ವಾನಕ್ಕೆ ಜೀವದಾನ : ವೈರಲ್​ ಆಯ್ತು ವಿಡಿಯೋ

ರೈಲು ಹಳಿಗಳ ಮೇಲೆ ಸಿಲುಕಿದ್ದ ನಾಯಿಯನ್ನು ರೈಲ್ವೆ ನಿಲ್ದಾಣದ ಸಿಬ್ಬಂದಿ ರಕ್ಷಿಸಿದ ಘಟನೆಯು ಮುಂಬೈನ ಬಾಂದ್ರಾ ಟರ್ಮಿನಸ್​ ಬಳಿಯಲ್ಲಿ ಸಂಭವಿಸಿದೆ. ರೈಲು ಬರಲು ಇನ್ನೇನು ಕೆಲವೇ ಸೆಕೆಂಡುಗಳು ಬಾಕಿ ಇರುವಾಗಲೇ ನಾಯಿಯನ್ನು ಅಪಾಯದಿಂದ ಪಾರು ಮಾಡಲಾಯ್ತು.

ರೈಲು ಹಳಿಗಳನ್ನು ನಿರ್ವಹಿಸಲು ಬಳಸುವ ಉಪಕರಣಗಳನ್ನು ಬಳಕೆ ಮಾಡಿ ಕಾರ್ಮಿಕರು ಟ್ರ್ಯಾಕ್​​ ನಡುವಿನ ಅಂತರವನ್ನು ಹೆಚ್ಚಿಸುವ ಮೂಲಕ ಶ್ವಾನವನ್ನು ರಕ್ಷಿಸಿದ್ದಾರೆ.

ಶ್ವಾನವನ್ನು ಅಪಾಯದಿಂದ ಪಾರು ಮಾಡುವ ಮೂಲಕ ಅದರ ಜೀವವನ್ನು ಉಳಿಸಿದ್ದಾರೆ. ಟ್ರ್ಯಾಕ್​ನಲ್ಲಿ ಸಿಲುಕಿಕೊಂಡಿದ್ದ ಶ್ವಾನದ ಪಾದವನ್ನು ಬಿಡಿಸುತ್ತಿದ್ದಂತೆಯೇ ಶ್ವಾನವು ಸ್ಥಳದಿಂದ ಓಡಿ ಹೋಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ವಾನ ರಕ್ಷಣಾ ಕಾರ್ಯಾಚರಣೆಯನ್ನು ಸಂಪೂರ್ಣ ವಿಡಿಯೋ ಮಾಡಲಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ವೈರಲ್​ ಆಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular