ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಪರೀಕ್ಷೆ ಬರೆಯಲು ಸಜ್ಜಾಗುತ್ತಿರುವ ಅಭ್ಯರ್ಥಿಗಳನ್ನು ಭೇಟಿ ಮಾಡಿ, ಅವರೊಡನೆ ಒಂದಷ್ಟು ಸಮಯ ಕಳೆದಿದ್ದಾರೆ.
ಯುಪಿಎಸ್‌ಸಿ ಪರೀಕ್ಷಾರ್ಥಿಗಳ ಕಣಜವಾಗಿರುವ ರಾಜಧಾನಿ ದೆಹಲಿಯ ಮುಖರ್ಜಿ ನಗರದಲ್ಲಿ, ಸರ್ಕಾರೀ ಉದ್ಯೋಗಾಕಾಂಕ್ಷಿಗಳೊಂದಿಗೆ ರಾಹುಲ್ ಗಾಂಧಿ ಸಮಾಲೋಚನೆಯಲ್ಲಿರುವ ವಿಡಿಯೋದ ಎರಡು ನಿಮಿಷದ ತುಣುಕೊಂದು ವೈರಲ್ ಆಗಿದೆ.
2023 ನಾಗರಿಕ ಸೇವಾ ಪರೀಕ್ಷೆಗಳನ್ನು ಮೇ 28ರಂದು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
2014ರಲ್ಲಿ, ಯುಪಿಎ-2 ಸರ್ಕಾರವಿದ್ದ ಸಂದರ್ಭದಲ್ಲಿಯೂ ಸಹ ಇದೇ ರೀತಿ ಯುಪಿಎಸ್‌ಸಿ ಆಕಾಂಕ್ಷಿಗಳನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ, ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಭಾಗಿಯಾಗಲು ಇರುವ ಗರಿಷ್ಠ ಪ್ರಯತ್ನಗಳಲ್ಲಿ ಹೆಚ್ಚಳ ಹಾಗೂ ಗರಿಷ್ಠ ವಯೋಮಾನದ ಸಡಿಲಿಕೆ ತರುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.
ಇದಕ್ಕೂ ಮುನ್ನ, ’ಮೋದಿ’ ಉಪ ನಾಮದ ವಿರುದ್ಧ ನೀಡಿದ್ದ ಮಾನಹಾನಿ ಹೇಳಿಕೆಯ ಕಾರಣ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ, ತಮ್ಮ ವಿರುದ್ಧದ ಈ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್‌ನ ಸೂರತ್ ನ್ಯಾಯಾಲಯ ವಜಾಗೊಳಿಸಿದೆ.
https://twitter.com/ANI/status/1649032708637728768?ref_src=twsrc%5Etfw%7Ctwcamp%5Etweetembed%7Ctwterm%5E1649032708637728768%7Ctwgr%5E2628f4ea06590f763009108db9397622abe91744%7Ctwcon%5Es1_&ref_url=https%3A%2F%2Fwww.freepressjournal.in%2Feducation%2Fwatch-rahul-gandhi-interacts-with-upsc-aspirants-in-delhis-mukherjee-nagar