HomeIndiaಬ್ಯಾಕ್​ಫ್ಲಿಪ್ ಮಾಡಿದ ಪಾರಿವಾಳ: ಹೀಗೂ ಉಂಟೇ ಎಂದ ನೆಟ್ಟಿಗರು

ಬ್ಯಾಕ್​ಫ್ಲಿಪ್ ಮಾಡಿದ ಪಾರಿವಾಳ: ಹೀಗೂ ಉಂಟೇ ಎಂದ ನೆಟ್ಟಿಗರು

ಕೆಲವು ನೃತ್ಯ ಕಲಾವಿದರು ಹಾಗೂ ಸರ್ಕಸ್​ ಕಲಾವಿದರು ಬ್ಯಾಕ್​ಫ್ಲಿಪ್​ ಮಾಡುವುದು ಸಾಮಾನ್ಯ. ಆದರೆ ಪಕ್ಷಿಗಳೂ ಈ ಸರ್ಕಸ್​ ಮಾಡುವುದನ್ನು ನೋಡಿರಲು ಸಾಧ್ಯವೇ ಇಲ್ಲ ಅಲ್ಲವೆ? ಆದರೆ ಪಾರಿವಾಳವೊಂದು ಬ್ಯಾಕ್​ ಫ್ಲಿಫ್​ ಮಾಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಇದರ ವಿಡಿಯೋ ವೈರಲ್​ ಆಗಿದೆ.

ಬ್ಯುಟೆಂಗೆಬೀಡೆನ್ ಎಂಬ ಟ್ವಿಟರ್ ಖಾತೆ ಈ ವಿಡಿಯೋ ಹಂಚಿಕೊಂಡಿದ್ದು, ಇದಾಗಲೇ ಈ ವಿಡಿಯೋವನ್ನು 5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಿಸಿದ್ದು, ಕಮೆಂಟ್​ಗಳಿಂದ ತುಂಬಿ ಹೋಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೀಡಿಯೊದಲ್ಲಿ, ಹಲವಾರು ಪಾರಿವಾಳಗಳು ಹೊಲದಲ್ಲಿ ಸುತ್ತಾಡುತ್ತಿರುವುದನ್ನು ಕಾಣಬಹುದು. ಅಲ್ಲಿ ಹಾಕಿರುವ ಕಾಳುಗಳನ್ನು ಅವು ತಿನ್ನುತ್ತಿವೆ. ಸ್ವಚ್ಛಂದವಾಗಿ ವಿಹರಿಸುತ್ತಿರುವ ಸಮಯದಲ್ಲಿ ಸುಂದರ ಪಾರಿವಾಳವೊಂದು ಇದ್ದಕ್ಕಿಂತೆಯೇ ಬ್ಯಾಕ್-ಟು-ಬ್ಯಾಕ್ ಫ್ಲಿಪ್‌ಗಳನ್ನು ಮಾಡುತ್ತದೆ. ಮೊದಲು ತನ್ನ ರೆಕ್ಕೆಗಳನ್ನು ಹರಡಿಕೊಂಡು ನಂತರ ಒಮ್ಮೆ ಅಥವಾ ಎರಡು ಬಾರಿ ಅಲ್ಲ, ಮೂರು ಬಾರಿ ಬ್ಯಾಕ್‌ಫ್ಲಿಪ್ ಅನ್ನು ಪ್ರದರ್ಶಿಸುತ್ತದೆ.
ಇದನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಹೀಗೂ ಉಂಟೆ ಎನ್ನುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular