HomeInternationalWatch Video | ವಿಮಾನ ಹಾರುವ ಮುನ್ನವೇ ಎಣ್ಣೆ ಕೇಳಿದ ಪ್ರಯಾಣಿಕ; ಹೊರಹಾಕಿದ ಸಿಬ್ಬಂದಿ

Watch Video | ವಿಮಾನ ಹಾರುವ ಮುನ್ನವೇ ಎಣ್ಣೆ ಕೇಳಿದ ಪ್ರಯಾಣಿಕ; ಹೊರಹಾಕಿದ ಸಿಬ್ಬಂದಿ

ಟೇಕಾಫ್ ಆಗುವ ಮುನ್ನವೇ ಜಿನ್ ಹಾಗೂ ಟಾನಿಕ್ ಕೇಳಿದ ಕಾರಣ ಪ್ರಥಮ ದರ್ಜೆ ಪ್ರಯಾಣಿಕನೊಬ್ಬನನ್ನು ಅಮೆರಿಕನ್ ಏರ್‌ಲೈನ್ಸ್‌ ವಿಮಾನದೊಳಗಿಂದ ಹೊರಹಾಕಲಾಗಿದೆ. ಈ ಘಟನೆಯ ಐದು ನಿಮಿಷಗಳ ವಿಡಿಯೋವೊಂದನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾಗಿದೆ.

ವಿಮಾನದ ಸಿಬ್ಬಂದಿಯೊಂದಿಗೆ ಒರಟಾಗಿ ನಡೆದುಕೊಂಡ ಕಾರಣ ಈತನನ್ನು ವಿಮಾನದಿಂದ ಹೊರಗೆ ಹಾಕಲಾಗಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯವಾಗಿ ಅಮೆರಿಕನ್ ಏರ್‌ಲೈನ್ಸ್‌ನ ಪ್ರಥಮ ದರ್ಜೆಯಲ್ಲಿ ಟೇಕಾಫ್ ಆಗುವ ಮುನ್ನವೂ ಸಹ ಪೇಯಗಳನ್ನು ನೀಡಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಹೇಗೆ ಈ ರೀತಿ ಆಗಿದೆ ಎಂದು ತಿಳಿದು ಬಂದಿಲ್ಲ.

Man forcibly removed from flight after refusing multiple requests to leave from attendants, pilot, and police. All started over being denied a pre-takeoff gin and tonic.
byu/losfathead inPublicFreakout

 

For Latest News Updates, Join Our Whatsapp Community🚩
RELATED ARTICLES

Most Popular