HomeEntertainment’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌....!

’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌….!

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುವುದೆಂದರೆ ಡ್ಯಾನ್ಸ್ ರೀಲ್ಸ್‌ಗಳು. ಅದರಲ್ಲೂ ’ನಾಟು ನಾಟು’ ಅಥವಾ ’ಕಾಮ್‌ ಡೌನ್’ ಹಾಡಿನ ರೀಲ್ಸ್‌ಗಳಂತೂ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ.

’ಡ್ಯಾನ್ಸಿಂಗ್ ಪೇದೆ’ ಎಂದೇ ಖ್ಯಾತರಾಗಿರುವ ಮುಂಬೈನ ಅಮೋಲ್ ಕಾಂಬ್ಳೆ, ಸೆಲೆನಾ ಗೊಮೆಜ಼್‌ರ ಬೀಟ್ ’ಕಾಮ್‌ ಡೌನ್‌’ಗೆ ಹೆಜ್ಜೆ ಹಾಕುತ್ತಿರುವ ಇನ್‌ಸ್ಟಾಗ್ರಾಂ ರೀಲ್ ಒಂದು ಭಾರೀ ಸಂಚಲನ ಸೃಷ್ಟಿಸಿದೆ. ಈ ಹಾಡಿಗೆ ಪೊಲೀಸಪ್ಪ ಭರ್ಜರಿ ಹೆಜ್ಜೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ರೀಲ್ಸ್‌ಗೆ ಅದಾಗಲೇ ಸಾವಿರಾರು ಲೈಕ್ಸ್‌ಗಳು ಸಂದಾಯವಾಗಿದ್ದು, 14 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಕಾಂಬ್ಳೆರ ಅದ್ಭುತ ಪಾದಚಲನೆ ಹಾಗೂ ದೇಹ ನುಲಿಸುವ ಶೈಲಿಗೆ ನೆಟ್ಟಿಗರು ಫಿದಾ ಆಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಗಸ್ಟ್‌ 25, 2022ರಲ್ಲಿ ಬಿಡುಗಡೆಯಾದ ಈ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ.

https://youtu.be/INnYjoc3RSw

For Latest News Updates, Join Our Whatsapp Community🚩
RELATED ARTICLES

Most Popular