Video | ಸಾಮಾನ್ಯರಲ್ಲಿ ಸಾಮಾನ್ಯರಂತೆ ಗಣೇಶನ ದರ್ಶನ ಪಡೆದ ಮಾಜಿ ʼವಿಶ್ವ ಸುಂದರಿʼ

ಬಾಲಿವುಡ್​ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್​​ ಗಣೇಶ ಚತುರ್ಥಿ ಸಂಭ್ರಮಾಚರಣೆಗಳ ನಡುವೆಯೇ ಮುಂಬೈನ ಐಕಾನಿಕ್​​ ಲಾಲ್​​ಬಾಗ್ಚಾ ರಾಜಾ ದರ್ಶನಕ್ಕಾಗಿ ಭೇಟಿ ನೀಡಿದ್ದಾರೆ.

ಸಾಮಾನ್ಯವಾಗಿ ಇಲ್ಲಿ ಸೆಲೆಬ್ರಿಟಿಗಳು ವಿವಿಐಪಿ ಲೇನ್​ನಲ್ಲಿ ಭೇಟಿ ನೀಡುತ್ತಾರೆ. ಆದರೆ ಮಾನುಷಿ ಚಿಲ್ಲರ್​​ ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯರಂತೆ ಸಾಲಿನಲ್ಲಿ ಕಾದು ಜನಸಂದಣಿಯ ನಡುವೆಯೇ ದೇವರ ದರ್ಶನ ಪಡೆದಿದ್ದಾರೆ.

ಲಾಲ್​ ಬಾಗ್ಚಾ ರಾಜಾದಲ್ಲಿ ಸಾಮಾನ್ಯರು ದೇವರ ದರ್ಶನಕ್ಕೆ ಸಿಕ್ಕಾಪಟ್ಟೆ ಕಷ್ಟ ಪಡುತ್ತಿರುವ ನಡುವೆಯೇ ಸೆಲೆಬ್ರಿಟಿಗಳು ಆರಾಮಾಗಿ ವಿವಿಐಪಿ ಲೈನ್​ನಲ್ಲಿ ತೆರಳಿ ದೇವರ ದರ್ಶನ ಪಡೆಯುತ್ತಿದ್ದರು.

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಾನುಷಿ ಚಿಲ್ಲರ್​ ಸಾಮಾನ್ಯರಲ್ಲಿ ಸಾಮನ್ಯರಂತೆ ದೇವರ ದರ್ಶನ ಪಡೆದಿರೋದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಈ ವಿಡಿಯೋವನ್ನ ಸ್ವತಃ ಮಾನುಷಿ ಚಿಲ್ಲರ್​​ ಕೂಡ ಶೇರ್​ ಮಾಡಿದ್ದು ಗಣಪತಿ ಬಪ್ಪಾ ಮೋರಿಯಾ ಎಂದು ಶೀರ್ಷಿಕೆ ನೀಡಿದ್ದಾರೆ. ಪುಟ್ಲಬಾಯಿ ಚಾಲ್​ನಲ್ಲಿರುವ ಲಾಲ್​ ಬಾಗ್ಚಾ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಲ ಸಾಕಷ್ಟು ಫೇಮಸ್​​ ಆಗಿದೆ. 1934ರಿಂದ ಇಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಲಾಗ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read