ನಿಮ್ಮ ಕಣ್ಣನ್ನು ನೀವೇ ನಂಬದಂತೆ ಮಾಡುತ್ತೆ ಈ ಘಟನೆ; ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ ವಿಡಿಯೋ !

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಈ ವಿಡಿಯೋ ವೀಕ್ಷಿಸಿದವರು ತಮ್ಮ ಕಣ್ಣನ್ನು ತಾವೇ ನಂಬದಂತೆ ಆಗಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಗೊತ್ತಾ ? ಮುಂದೆ ಓದಿ.

ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸೈಕಲ್ ಮೇಲೆ ಹೋಗುತ್ತಿದ್ದ ಯುವಕನೊಬ್ಬ ತನ್ನ ತಲೆಯ ಮೇಲೆ ಫ್ರಿಡ್ಜ್ ಇಟ್ಟುಕೊಂಡು ಸಾಗಿದ್ದಾನೆ. ಅಷ್ಟಕ್ಕೂ ಈತ ತನ್ನ ತಲೆಯಿಂದಲೇ ಈ ಫ್ರಿಡ್ಜ್ ಬ್ಯಾಲೆನ್ಸ್ ಮಾಡಿದ್ದಾನೆ.

ನೀಲಿ ಬಣ್ಣದ ಸೈಕಲ್ ಪೆಡಲ್ ಮಾಡುತ್ತಿರುವ ಈ ಯುವಕ ಯಾವುದೇ ಆಧಾರವಿಲ್ಲದೆ ತನ್ನ ತಲೆಯ ಮೇಲೆ ಫ್ರಿಡ್ಜ್ ಸಾಗಿಸಿದ್ದಾನೆ. ಅಷ್ಟು ದೊಡ್ಡ ಫ್ರಿಡ್ಜ್ ಅನ್ನು ಈತ ತನ್ನ ತಲೆ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ಹೋಗಿರುವುದು ಸೋಜಿಗ ಹುಟ್ಟಿಸಿದೆ. ಈ ವಿಡಿಯೋ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಸೃಷ್ಟಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read