ಕಾಣೆಯಾಗಿದ್ದ ಸಾಕುನಾಯಿಯನ್ನು ಎರಡು ತಿಂಗಳ ಬಳಿಕ ಮತ್ತೆ ಕಂಡ ಕುಟುಂಬವೊಂದರ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಮೆಚ್ಚುಗೆಯಾಗಿದೆ.
ಜನವರಿಯಲ್ಲಿ ಮೆಚ್ಚಿನ ಸಾಕುನಾಯಿ ಲಿಯೋ ಕಾಣೆಯಾದಾಗಿನಿಂದ ಈ ಕುಟುಂಬಕ್ಕೆ ಜಗತ್ತನ್ನೇ ಕಳೆದುಕೊಂಡ ಭಾವ ಆವರಿಸಿತ್ತು. ಲಿಯೋಗಾಗಿ ಕುಟುಂಬ ಹುಡುಕದ ಜಾಗವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಶ್ವಾನಕ್ಕಾಗಿ ಶೋಧಿಸಿದ್ದಾರೆ. ವಾರಗಳ ಮಟ್ಟಿಗೆ ಹುಡುಕಿದರೂ ಯಾವುದೇ ಪ್ರಯೋಜನವಾಗದ ಕಾರಣ ಕುಟುಂಬಕ್ಕೆ ಲಿಯೋ ಸಿಗುವ ಭರವಸೆ ಕಳೆದುಹೋಗಿತ್ತು.
ಆದರೆ ಒಂದು ದಿನ ಎಲ್ಲವೂ ಬದಲಾಯಿತು. ಕಳೆದು ಹೋಗಿದ್ದ ತಮ್ಮ ಶ್ವಾನಕ್ಕೆ ಬೇರೊಂದು ಕುಟುಂಬ ಆಶ್ರಯ ಕೊಟ್ಟಿರುವ ವಿಚಾರ ತಿಳಿದ ಈ ಕುಟುಂಬ ತನ್ನ ಮೆಚ್ಚಿನ ಸದಸ್ಯನನ್ನು ಮರಳಿ ಮನೆಗೆ ಸ್ವಾಗತಿಸಿದೆ.
ಪುಟ್ಟ ಬಾಲಕಿಯೊಬ್ಬಳು ನಾಯಿಯನ್ನು ಕಂಡು ಭಾವುಕಳಾಗಿ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಲಿಯೋ ಸಹ ತನ್ನ ಕುಟುಂಬಸ್ಥರನ್ನು ಕೊನೆಗೂ ಭೇಟಿಯಾದ ಸಂತಸದಲ್ಲಿ ಬಾಲಕಿಯ ಸುತ್ತಲೂ ಬಾಲವಾಡಿಸುತ್ತಾ ಸುತ್ತುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾನೆ.
https://twitter.com/GoodNewsCorres1/status/1637151541013409800?ref_src=twsrc%5Etfw%7Ctwcamp%5Etweetembed%7Ctwterm%5E1637151541013409800%7Ctwgr%5E8ab08ba016ba2b89404aff27f79a7e1b734f5bf2%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-little-girl-cant-stop-crying-after-reunion-with-lost-pet-dog-7347559.html
https://twitter.com/Steve_667788/status/1637238201344487424?ref_src=twsrc%5Etfw%7Ctwcamp%5Etweetembed%7Ctwterm%5E1637238201344487424%7Ctwgr%5E8ab08ba016ba2b89404aff27f79a7e1b734f5bf2%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-little-girl-cant-stop-crying-after-reunion-with-lost-pet-dog-7347559.html
https://twitter.com/GoodNewsCorres1/status/1637151541013409800?ref_src=twsrc%5Etfw%7Ctwcamp%5Etweetembed%7Ctwterm%5E1637505425892421636%7Ctwgr%5E8ab08ba016ba2b89404aff27f79a7e1b734f5bf2%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-little-girl-cant-stop-crying-after-reunion-with-lost-pet-dog-7347559.html