ಶನಿವಾರ ನಡೆದ ಮಹಾರಾಜ ಶ್ರೀ ರಾಮಚಂದ್ರ ಭಂಜದೇಯೊ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ವೇಳೆ ಲೈಟ್ ಆಫ್ ಆದ ಘಟನೆ ನಡೆದಿದೆ.
ಮುರ್ಮು ಅವರ ಭಾಷಣ ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ದೀಪ ಆರಿದ್ದು, ಕತ್ತಲು ಆವರಿಸಿದೆ. ಆದರೆ, ಮೈಕ್ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರದ ಕಾರಣ ಅವರು ಮಾತು ಮುಂದುವರಿಸಿದರು. ಏನೂ ಕಾಣಿಸದಿದ್ದರೂ ಸಹ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರು ರಾಷ್ಟ್ರಪತಿಯ ಭಾಷಣವನ್ನು ತಾಳ್ಮೆಯಿಂದ, ಮೌನವಾಗಿ ಕೇಳಿದ್ರು.
ಟಾಟಾ ಪವರ್, ಉತ್ತರ ಒಡಿಶಾ ಪವರ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್‌ನ ಸಿಇಒ ಭಾಸ್ಕರ್ ಸರ್ಕಾರ್ ಅವರು ಸಭಾಂಗಣದಲ್ಲಿ ಯಾವುದೇ ವಿದ್ಯುತ್ ವ್ಯತ್ಯಯವಾಗಿಲ್ಲ. ಆದರೆ, ವಿದ್ಯುತ್ ವೈರಿಂಗ್‌ನಲ್ಲಿನ ಕೆಲವು ದೋಷಗಳಿಂದಾಗಿ ಇದು ಉಂಟಾಗಿರಬಹುದು ಎಂದು ಹೇಳಿದರು.
ಇನ್ನು ವಿಶ್ವವಿದ್ಯಾನಿಲಯದ ಉಪಕುಲಪತಿ ಸಂತೋಷ್ ಕುಮಾರ್ ತ್ರಿಪಾಠಿ ಘಟನೆಯ ಬಗ್ಗೆ ವಿಷಾದಿಸಿದರು ಮತ್ತು ರಾಷ್ಟ್ರಪತಿ ಮುರ್ಮು ಅವರ ಭಾಷಣದ ಸಮಯದಲ್ಲಿ ವಿದ್ಯುತ್ ದೋಷಕ್ಕಾಗಿ ಕ್ಷಮೆಯಾಚಿಸಿದರು. ವಿದ್ಯುತ್ ವೈಫಲ್ಯದಿಂದ ನಮಗೆ ನಾಚಿಕೆಯಾಗುತ್ತಿದೆ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಮತ್ತು ಘಟನೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈರಂಗಪುರದವರಾದ ಮುರ್ಮು ಅವರನ್ನು ಮಣ್ಣಿನ ಮಗಳು ಎಂದೇ ಕರೆಯಲಾಗುತ್ತದೆ.
https://twitter.com/JournoSatish/status/1654762121727721474?ref_src=twsrc%5Etfw%7Ctwcamp%5Etweetembed%7Ctwterm%5E1654762121727721474%7Ctwgr%5Edad958eea72ea4a6e056a326e2eb1ae291021eec%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fwatchlightsgooffduringpresidentmurmusconvocationspeechatodishauniversity-newsid-n497110818