ಡಿಜೆ ವಿಚಾರಕ್ಕೆ ಗಲಾಟೆ: ರಣಾಂಗಣವಾದ ಮದುವೆ ಕಾರ್ಯಕ್ರಮ

ಘಾಜಿಯಾಬಾದ್‌: ಉತ್ತರ ಪ್ರದೇಶದ ಘಾಜಿಯಾಬಾದ್‌ನ ಹೋಟೆಲ್‌ವೊಂದರಲ್ಲಿ ಭಾನುವಾರ ಅತಿಥಿಗಳು ಮತ್ತು ಸಿಬ್ಬಂದಿ ನಡುವೆ ಪರಸ್ಪರ ಘರ್ಷಣೆ ಉಂಟಾಗಿ ಮದುವೆ ಮನೆಯು ಗದ್ದಲದ ಕೇಂದ್ರವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದೆ.

ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಹೋಟೆಲ್ ಸಿಬ್ಬಂದಿ ದೊಣ್ಣೆಗಳು, ರಾಡ್‌ಗಳು ಮತ್ತು ಬೆಲ್ಟ್‌ಗಳನ್ನು ಹಿಡಿದುಕೊಂಡು ಅತಿಥಿಗಳನ್ನು ಹೊಡೆಯುವುದನ್ನು ನೋಡಬಹುದಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಭಯದಿಂದ ಕಿರುಚುತ್ತಿರುವುದನ್ನು ಕಾಣಬಹುದು.

ಕೆಲವು ಪುರುಷರು ಮತ್ತು ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ನೆಲದ ಮೇಲೆ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ದಿ ಗ್ರ್ಯಾಂಡ್ ಐ ಆರ್‌ಎಸ್ ಹೋಟೆಲ್‌ನ ಸಿಬ್ಬಂದಿ ಮಧ್ಯರಾತ್ರಿ ಡಿಜೆ ಸಮಾರಂಭಕ್ಕೆ ನಿರಾಕರಿಸಿದ ನಂತರ ಈ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ಹಾಜರಿದ್ದ ಅತಿಥಿಗಳು ಹೋಟೆಲ್‌ನ ಬೌನ್ಸರ್‌ಗಳು ಮತ್ತು ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಘಟನೆಯಲ್ಲಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

ಈ ಹೋಟೆಲ್ ಬಿಜೆಪಿ ಮುಖಂಡರೊಬ್ಬರದ್ದು ಎಂದು ಹೇಳಲಾಗುತ್ತಿದೆ. ಸದ್ಯ ಒಂಬತ್ತು ಜನರನ್ನು ಬಂಧಿಸಲಾಗಿದೆ. ವೀಡಿಯೋ ಆಧಾರದ ಮೇಲೆ ಪೊಲೀಸರು ಒಂಬತ್ತು ಆರೋಪಿಗಳನ್ನು ಬಂಧಿಸಿದ್ದು, ಉಳಿದವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

https://twitter.com/NigarNawab/status/1629778834731192321?ref_src=twsrc%5Etfw%7Ctwcamp%5Etweetembed%7Ctw

https://twitter.com/yadavakhilesh/status/1629774714796400640?ref_src=twsrc%5Etfw%7Ctwcamp%5Etweetembed%7Ctwterm%

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read