ಐಫಲ್ ಟವರ್ ಮುಂದೆ ‘ಪಠಾಣ್’ ಹಾಡಿಗೆ ಅಭಿಮಾನಿಗಳ ಬಿಂದಾಸ್ ಡಾನ್ಸ್

ಬಾಲಿವುಡ್‌ನ ಬಾದ್‌ಶಾಹ್ ಶಾರುಖ್‌ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟಿಸಿದ ‘ಪಠಾಣ್ ಬಾಲಿವುಡ್‌ನ ಬ್ಲಾಕ್ ಬಸ್ಟರ್ ಸಿನೆಮಾಗಳಲ್ಲೊಂದು. ಈ ಸಿನೆಮಾ ಬಿಡುಗಡೆ ಆಗಿದ್ದೇ ಆಗಿದ್ದು ಶಾರುಖ್ ಆ್ಯಕ್ಷನ್ ಜೊತೆ ಜೊತೆಗೆ ಡಾನ್‌ಗೂ ಅಭಿಮಾನಿಗಳಿಗೂ ಫಿದಾ ಆಗಿ ಹೋಗಿದ್ದಾರೆ. ಸೊಶಿಯಲ್ ಮೀಡಿಯಾದಲ್ಲಿ ಅವರದೇ ಹವಾ ಎದ್ದಿದೆ.

ಇತ್ತಿಚೆಗೆ ಪ್ಯಾರಿಸ್‌ನ ಐಫಲ್ ಟವರ್ ಮುಂದೆ SRK ಅಭಿಮಾನಿಗಳು ‘ಪಠಾಣ್ ಸಿನೆಮಾದ ‘ಝುಮೆ ಜೋ ಪಠಾಣ್ ಸಿನೆಮಾ ಹಾಡಿಗೆ ಬಿಂದಾಸ್ ಸ್ಟೆಪ್ ಹಾಕಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದೀಪ್ತಿ ತಮ್ಮ ಫಿಟ್‌ನೆಸ್ ಟ್ರೇನರ್ ಜೊತೆ ಸೇರಿ ಈ ಡಾನ್ಸ್ ಮಾಡಿದ್ದಾರೆ. ಅದು ಕೂಡಾ ಶಾರುಖ್ ಸ್ಟೈಲ್‌ನಲ್ಲಿ, ‘ಡಾನ್ ವಿತ್ ದೀಪ್ತಿ’ ಅನ್ನೊ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಈ ವೀಡಿಯೋವನ್ನ
ಪೋಸ್ಟ್ ಮಾಡಲಾಗಿದೆ.

ದೀಪ್ತಿಯವರು ಮಾಡಿರುವ ಡಾನ್ಸ್ ಕೇವಲ ಅಲ್ಲಿದ್ದವರನ್ನ ಮಾತ್ರ ಆಕರ್ಷಿಸಿಲ್ಲ. ಬದಲಾಗಿ ನೆಟ್ಟಿಗರ ಗಮನವನ್ನ ಸೆಳೆದಿದೆ. ಈಗಾಗಲೇ ಈ ವಿಡಿಯೋವನ್ನ ಸಾವಿರಾರು ಜನರು ವೀಕ್ಷಿಸಿ, ಲೈಕ್ ಮಾಡಿದ್ದಾರೆ. ಕೇವಲ ಐಫಲ್ ಟವರ್‌ ಮುಂದೆ ಮಾತ್ರ ಅಲ್ಲ, ಜಗತ್ತಿನ ಅನೇಕ ಪ್ರವಾಸಿ ತಾಣಗಳಲ್ಲಿ ಶಾರುಖ್ ಅಭಿಮಾನಿಗಳು ‘ಪಠಾಣ್’ ಸಿನೆಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜಗತ್ತಿನಾದ್ಯಂತ ಇರುವ ಅಭಿಮಾನಿಗಳು ತೋರಿಸ್ತಿರೋ ಪ್ರೀತಿಗೆ ನಟ ಶಾರುಖ್ ಸಹ ಅಭಿನಂದನೆ ತಿಳಿಸಿದ್ದಾರೆ.

ವಿಶ್ವದಾದ್ಯಂತ ಬಾಲಿವುಡ್ ಸಿನೆಮಾಗಳಿಗೆ ಪ್ರತ್ಯೇಕ ಮಾರುಕಟ್ಟೆಗಳಿವೆ. ಇಲ್ಲಿನ ಹಾಡು, ಕಥೆ, ನೃತ್ಯ, ಸಂಗೀತ ಕೇಳಿ ವಿದೇಶಿಯರು ಫಿದಾ ಆಗಿದ್ದಾರೆ. ಈ ಹಿಂದೆಯೂ ಹಿಟ್ ಆಗಿರುವ ಬಾಲಿವುಡ್ ಸಿನೆಮಾಗಳಿಗೆ ವಿದೇಶಿಯರು ಸ್ಟೆಪ್ ಹಾಕಿ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದಾರೆ. ಇದು ಕೂಡಾ ಅದರಲ್ಲಿ ಒಂದಾಗಿದೆ.

https://www.youtube.com/watch?v=1NxGKfOJOHw

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read