ಸಾಮಾಜಿಕ ಜಾಲತಾಣವು ಅನೇಕ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಅಪರೂಪದ ಪ್ರತಿಭೆಗಳನ್ನು ಗುರುತಿಸಲು ಜಾಲತಾಣಗಳು ನೆರವಾಗಲಿದ್ದು, ಅಂಥ ಕೆಲವು ಪ್ರತಿಭೆಗಳ ವಿಡಿಯೋಗಳು ವೈರಲ್ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
ಈ ವಿಡಿಯೋದಲ್ಲಿ ರಾಜಸ್ಥಾನದ ಯುವತಿಯೊಬ್ಬಳು ಕ್ರಿಕೆಟ್ ಆಟವಾಡುವುದನ್ನು ನೋಡಬಹುದು. ಈಕೆ ಬ್ಯಾಟಿಂಗ್ ಮಾಡುವ ಪರಿ ಕಂಡರೆ ಅಚ್ಚರಿಯಾಗುವುದು ಖಂಡಿತ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆಟಗಾರ್ತಿಯು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ನೋಡುಗರನ್ನು ಬೆಚ್ಚಿ ಬೀಳಿಸಿದ್ದಾಳೆ. ಪಂದ್ಯದ ನಿಖರವಾದ ಸ್ಥಳ ತಿಳಿದಿಲ್ಲ. ಆದರೆ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಈ ಆಟ ಆಡಿರಬಹುದು ಎನ್ನಲಾಗಿದೆ.
ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಆಟವನ್ನು ನೆನಪಿಸಿಕೊಳ್ಳುವಂತೆ ಈಕೆಯ ಆಟದ ಪರಿಯಿದೆ. ಇಂಥ ಪ್ರತಿಭೆಗಳಿಗೆ ಉತ್ತೇಜನ ನೀಡಬೇಕು ಮತ್ತು ಉತ್ತಮ ತರಬೇತಿ ನೀಡಬೇಕು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ಗಮನ ಸೆಳೆದಿದ್ದಾರೆ ಸ್ವಾತಿ.
https://twitter.com/SwatiJaiHind/status/1625072029115244549?ref_src=twsrc%5Etfw%7Ctwcamp%5Etweetembed%7Ctwterm%5E1625072029115244549%7Ctwgr%5E9bf3279c89f0439e626d4fa792e9a22b17c83c2a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-female-version-of-sky-rajasthani-girl-hitting-back-to-back-sixes-goes-viral-swati-maliwal-shares-video-on-twitter