ಅಣ್ತಮ್ಮನ ಕಮಾಲ್ ಡಾನ್ಸ್: ಮದುವೆ ಮನೆಯಲ್ಲಿದ್ದವರೆಲ್ಲರೂ ಫುಲ್ ಫಿದಾ

ಮದುವೆ ಮನೆ ಅಂದ್ರೆ,ಅಲ್ಲಿ ವಾಲಗದ ಸದ್ದು ಇರೋದು ಸಾಮಾನ್ಯ. ಆದರೆ ಈಗ ಟ್ರೆಂಡ್ ಬದಲಾಗಿದೆ. ಮದುಮಗಳು ಇಲ್ಲಾ, ಮದುಮಗ ಡಾನ್ಸ್ ಮಾಡೋದು ಕಾಮನ್ ಆಗ್ಹೋಗಿದೆ. ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ಅಜ್ಜಿ, ತಾತ ಹಾಗೆಯೇ ಪುಟ್ ಪುಟಾಣಿಗಳು ಸೇರಿ ಕುಣಿಯೋದೇ ಸಂಭ್ರಮವಾಗಿರುತ್ತೆ.

ಅಂತಹ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗ್ತಾ ಇರುತ್ತೆ, ಈಗ ಅಂತಹದ್ದೇ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೊ ಸ್ಪೆಷಲಿಟಿ ಏನಂದ್ರೆ, ಇಲ್ಲಿ ಸಹೋದರರಿಬ್ಬರು ಮದುವೆ ಮನೆಯ ವೇದಿಕೆ ಮೇಲೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ.

`ಬಡೇ ಮಿಯಾ ಸೋ ಬಡೇ ಮಿಯಾ ಛೋಟೆ ಮಿಯಾ ಸುಬ್ಹಾನಲ್ಲಾ‘ ಅನ್ನೊ 1998ರ ಬಾಲಿವುಡ್ ಹಾಡಿಗೆ ಸಹೋದರರಿಬ್ಬರು ಇಲ್ಲಿ ಡಾನ್ಸ್ ಮಾಡಿದ್ದಾರೆ. ನಟ ಅಮಿತಾಬ್ ಬಚ್ಚನ್ ಹಾಗೂ ನಟ ಗೋವಿಂದ್ ಈ ಹಾಡಿಗೆ ಜಬರ್ದಸ್ ಆಗಿ ಡಾನ್ಸ್ ಮಾಡಿ, ಅಭಿಮಾನಿಗಳಿಂದ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಂಡಿದ್ದರು.

ಈಗ ಮತ್ತೆ ಅಣ್ತಮ್ಮಂದಿರ ಜೋಡಿ ಸನ್‌ಗ್ಲಾಸ್ ಹಾಕ್ಕೊಂಡು, ಸೂಟ್ ಬೂಟ್ ನಲ್ಲಿ ಸ್ಟೆಜ್ ಹತ್ತಿ ಡಾನ್ಸ್ ಮಾಡಿ ಎಲ್ಲರ ಹೃದಯ ಗೆದ್ದಿದ್ದಾರೆ. ವಿಶೇಷ ಏನಂದ್ರೆ, ಇವರಿಬ್ಬರ ವಯಸ್ಸು 60 ವರ್ಷಕ್ಕೂ ಹೆಚ್ಚು. ಇವರಿಬ್ಬರೂ ಹೀಗೆ ಡಾನ್ಸ್ ಮಾಡೋದನ್ನ ನೋಡಿದ್ರೆ ಗೊತ್ತಾಗುತ್ತೆ. ಅವರ ವಯಸ್ಸು ಕೇವಲ ದೇಹಕ್ಕಾಗಿರಬಹುದೇ ವಿನಃ ಮನಸಿಗಲ್ಲ ಎಂದು

ಸಂಗೀತ್ ಹಾಗೂ ಸಾಲ್ವಿ ಅನ್ನುವುವರು ಈ ಡಾನ್ಸ್ ವಿಡಿಯೋವನ್ನ ತಮ್ಮ ಇನ್ಸ್ ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಈ ಪೋಸ್ಟ್‌ನ್ನ 1.4 ಮಿಲಿಯನ್ ಜನ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಅನೇಕರು `ಇವರಿಬ್ಬರಿಗೆ ವಯಸ್ಸಾಗಿದ ಅಂತಹ ಹೇಳೊದಕ್ಕೆ ಸಾಧ್ಯವೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ‘ಈ ವಿಡಿಯೋ ನನ್ನ ದಿನವನ್ನು ಉತ್ತಮಗೊಳಿಸಿತು’ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಹೃದಯದ ಇಮೋಜಿಯನ್ನು ಕಾಮೆಂಟ್ ಮಾಡಿ, ತಮಗೆ ಆದ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.

https://youtu.be/IfoPuCsUGrM

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read