‘ಅಸಭ್ಯ’ ರೀಲ್ಸ್ ಮಾಡುತ್ತಿದ್ದ ಯುವಕನಿಗೆ ವೃದ್ಧನಿಂದ ದೊಣ್ಣೆ ಏಟು, ವಿಡಿಯೋ ವೈರಲ್ | Watch

ಜನನಿಬಿಡ ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಯುವಕನಿಗೆ ವೃದ್ಧರೊಬ್ಬರು ದೊಣ್ಣೆಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಳಕೆದಾರರು ವೃದ್ಧರ ಈ ಕೃತ್ಯವನ್ನು ಬೆಂಬಲಿಸಿದ್ದು, ಜನರು ವಿಡಿಯೋ ಚಿತ್ರೀಕರಿಸುವಾಗ ಸಮಯ ಮತ್ತು ಸ್ಥಳದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಕೆಲವರು, ವೃದ್ಧರು ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಯುವಕನು ಹುಡುಗಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದಾನೆಂದು ಅವರು ಭಾವಿಸಿದರು ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಯುವಕನು ಜನನಿಬಿಡ ಬೀದಿಯಲ್ಲಿ ಅಸಭ್ಯ ರೀಲ್ಸ್ ಮಾಡುತ್ತಿದ್ದಾಗ ವೃದ್ಧರು ಕೋಪಗೊಂಡಿದ್ದಾರೆ. ಅವರು ತಮ್ಮ ಕಾರಿನಿಂದ ಇಳಿದು, ದೊಣ್ಣೆಯನ್ನು ತೆಗೆದುಕೊಂಡು ಯುವಕನಿಗೆ ಹೊಡೆಯಲು ಪ್ರಾರಂಭಿಸಿದ್ದು, ಹೊಡೆತದಿಂದ ತಪ್ಪಿಸಿಕೊಳ್ಳಲು ಯುವಕ ಓಡಿಹೋಗಿದ್ದಾನೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಹಲ್ಲೆಯನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ.

41 ಸೆಕೆಂಡ್‌ಗಳ ಈ ವಿಡಿಯೋ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೃದ್ಧನನ್ನು ಬೆಂಬಲಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read