ಅಪ್ಪ-ಅಮ್ಮನಿಗೆ ಮಗಳಿಂದ ಅಪೂರ್ವ ಉಡುಗೊರೆ: ಭಾವುಕರನ್ನಾಗಿಸುತ್ತೆ ಪಾಲಕರ ಪ್ರತಿಕ್ರಿಯೆ

ಹೆತ್ತವರೊಂದಿಗೆ ಮಗಳ ಸಂಬಂಧವು ವಿಶೇಷವಾದದ್ದು. ಈ ಸಂಬಂಧಕ್ಕೆ ಬೆಲೆ ಕಟ್ಟಲಾಗದ್ದು. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತಮ್ಮ ತಂದೆ-ತಾಯಿಗೆ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ, ಮಹಿಳೆಯು ಟೇಪ್ ಮತ್ತು ಕವರ್‌ನಲ್ಲಿ ಸುತ್ತಿರುವ ಬೃಹತ್ ಆಯತಾಕಾರದ ರಚನೆಯನ್ನು ಅನ್‌ಬಾಕ್ಸಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಯಾರೋ ಒಬ್ಬರು ನಿಮಗೆ ಇದನ್ನು ಉಡುಗೊರೆ ನೀಡಿದ್ದಾರೆ ಎಂದು ಆಕೆಯ ಪಾಲಕರಿಗೆ ಹೇಳುತ್ತಾರೆ.

ನಂತರ ಅದನ್ನು ತೆಗೆಯುವಂತೆ ಅಪ್ಪ – ಅಮ್ಮನಿಗೆ ಹೇಳಿದಾಗ ಅವರು ಅದನ್ನು ತೆಗೆದು ನೋಡಿದಾಗ ಆಶ್ಚರ್ಯಚಕಿತರಾಗುತ್ತಾರೆ. ವರ್ಣರಂಜಿತ ಚಿತ್ರಕಲೆಗೆ ಇಬ್ಬರೂ ಮೂಕವಿಸ್ಮಿತರಾಗುತ್ತಾರೆ.

ಈ ವಿಡಿಯೋವನ್ನು ಶ್ರೀಲಕ್ಷ್ಮಿ ಎನ್ನುವವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. “ನನಗೆ ದೇವರು ನನ್ನ ಹೆತ್ತವರ ರೂಪದಲ್ಲಿ ಮಾತ್ರ ಇದ್ದಾನೆ” ಎಂದು ಅವರು ಬರೆದುಕೊಂಡಿದ್ದು, ನೆಟ್ಟಿಗರು ಇದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

https://www.youtube.com/watch?v=V0Yy-K1cVKw&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read