HomeAgricultureViral Video | ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸು

Viral Video | ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸು

ದೇಶದ ಮೊಟ್ಟ ಮೊದಲ ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸುವೊಂದು ಆನ್ಲೈನ್‌ನಲ್ಲಿ ಸುದ್ದಿ ಮಾಡುತ್ತಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ರೆಸ್ಟೋರೆಂಟ್ ಉದ್ಘಾಟಿಸಿದ ಹಸುವಿಗೆ ಮೊದಲ ಬಾರಿಗೆ ಊಟ ಬಡಿಸಿದ್ದಾರೆ ಅಲ್ಲಿನ ಸಿಬ್ಬಂದಿ.

’ಆರ್ಗನಿಕ್ ಓಯಸಿಸ್’ ಹೆಸರಿನ ಈ ರೆಸ್ಟೋರೆಂಟ್‌ನಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಆಹಾರ ಉತ್ಪಾದಿಸಲಾಗುತ್ತದೆ. ನಗರದ ಲುಲು ಮಾಲ್‌ ಬಳಿ ಇರುವ ಸುಶಾಂತ್ ಗಾಲ್ಫ್ ಸಿಟಿಯಲ್ಲಿ ಈ ರೆಸ್ಟೋರೆಂಟ್‌ ಆರಂಭಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಉಪ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ರೆಸ್ಟೋರೆಂಟ್ ಮ್ಯಾನೇಜರ್‌ ಶೈಲೇಂದ್ರ ಸಿಂಗ್ ಈ ಕುರಿತು ಮಾತನಾಡಿದ್ದು, “ತನ್ನದೇ ಉತ್ಪಾದನೆ, ನಿಯಂತ್ರಣ ಹಾಗೂ ಸಂಸ್ಕರಣೆ ಹೊಂದಿರುವ ಇಂಥ ಒಂದು ರೆಸ್ಟೋರೆಂಟ್ ದೇಶದಲ್ಲೇ ಮೊದಲು ಎಂದು ನಾನು ಭಾವಿಸುತ್ತೇನೆ. ಆಹಾರ ಸೇವನೆ ಮಾಡಿದ ಬಳಿಕ ಖುದ್ದು ಗ್ರಾಹಕರಿಗೆ ಅದರ ವ್ಯತ್ಯಾಸ ತಿಳಿಯಲಿದೆ,” ಎಂದಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular