ಪ್ರಸಿದ್ಧ ಬಾಲಿವುಡ್ ನಟ ಅನುಪಮ್ ಖೇರ್ ಅವರು ತಮ್ಮ 70 ನೇ ಹುಟ್ಟುಹಬ್ಬವನ್ನು ಮಾರ್ಚ್ 7 ರಂದು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭವನ್ನು ಅದ್ದೂರಿಯಾಗಿ ಆಚರಿಸುವ ಬದಲು, ಅವರು ಸರಳತೆ ಮತ್ತು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಹರಿದ್ವಾರದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದರು.
ದೇವಾಲಯದ ಹೊರಗೆ ಸಾಧುಗಳಿಗೆ ಆಹಾರ ವಿತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರ ಆಪ್ತ ಸ್ನೇಹಿತ ಅನಿಲ್ ಕಪೂರ್ ಸಹ ಭಾಗವಹಿಸಿದ್ದರು.
ಅನುಪಮ್ ಖೇರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. 28ನೇ ವಯಸ್ಸಿನಲ್ಲಿ 65 ವರ್ಷದ ಪಾತ್ರವನ್ನು ನಿರ್ವಹಿಸಿದ ಇವರು ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಇವರು ಎಮರ್ಜೆನ್ಸಿ ಚಿತ್ರದಲ್ಲಿ ನಟಿಸಿದ್ದರು. ಇವರ ಮುಂದಿನ ಚಿತ್ರಗಳಾದ ತುಮ್ಕೊ ಮೇರಿ ಕಸಮ್, ದಿ ರಾಜಾ ಸಾಬ್, ದಿ ಡೆಲ್ಲಿ ಫೈಲ್ಸ್, ಮೆಟ್ರೋ… ಇನ್ ದಿನೋ ಬಿಡುಗಡೆಗೆ ಸಿದ್ದವಾಗಿವೆ.