ಮಹಿಳಾ ದಿನಾಚರಣೆಯಂದು ಪ್ರೆಗಾ ನ್ಯೂಸ್ ವಿಭಿನ್ನ ಜಾಹೀರಾತು…!

ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತೆ. ಇದೆ ವಿಶೇಷ ದಿನದಂದು ಪ್ರೆಗಾ ನ್ಯೂಸ್ ಹೊಸ ಜಾಹಿರಾತೊಂದನ್ನ ಬಿಡುಗಡೆ ಮಾಡಿದೆ.

ಮಹಿಳೆ ಹೆರಿಗೆ ಆದ ನಂತರ ಅನುಭವಿಸೋ ಸಂಕಟವನ್ನ ವಸ್ತುವಿಷಯವನ್ನಾಗಿ ಇಟ್ಟುಕೊಂಡಿರುವ ವಿಡಿಯೋ ಇದಾಗಿದ್ದು. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಈಗ ವೈರಲ್ ಆಗಿದೆ.

ಮ್ಯಾನ್‌ಕೈಂಡ್‌ ಫಾರ್ಮಾ ಇದು ಗರ್ಭಧಾರಣೆ ಪತ್ತೆ ಮಾಡುವ ಆನ್‌ಲೈನ್‌ ಸಂಸ್ಥೆಯಾಗಿದ್ದು, ಈಗ ಮೂರು ನಿಮಿಷಕ್ಕಿಂತಲೂ ಕಡಿಮೆ ಅವಧಿಯ ಈ ವಿಡಿಯೋ ಒಂದನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಮಾತೃತ್ವದ ಸಮಯದಲ್ಲಿ ಮಹಿಳೆಯರ ಮನಸ್ಸಿನಾಳದ ಭಾವನೆಗಳನ್ನ ವ್ಯಕ್ತಪಡಿಸಲಾಗಿದೆ. ಮಹಿಳೆಯೊಬ್ಬಳು ತಾಯಿಯಾದ ಮೇಲೆ ಆಕೆಯ ದೇಹದಲ್ಲಿ ಆಗುವ ಬದಲಾವಣೆಗಳೇನು? ಅದಕ್ಕಾಗಿ ಆಕೆ ಯಾವೆಲ್ಲ ರೀತಿ ಹೊಂದಿಕೊಂಡು ಹೋಗುತ್ತಾಳೆ? ಅನ್ನೊದನ್ನ ಈ ಜಾಹಿರಾತಿನಲ್ಲಿ ಗಮನಿಸಬಹುದು.

ಇಲ್ಲಿ ಮಹಿಳೆಯೊಬ್ಬಳು ಬಟ್ಟೆ ಅಂಗಡಿಗೆ ಹೋಗುತ್ತಾಳೆ. ಅಲ್ಲಿ ಆಕೆಗೆ ಒಂದು ಡ್ರೆಸ್ ಇಷ್ಟವಾಗುತ್ತೆ. ಆದರೂ ಅದನ್ನ ಆಕೆ ಖರೀದಿ ಮಾಡುವುದಿಲ್ಲ. ಆಕೆಯ ಜೊತೆ ಬಂದ ಇನ್ನೊರ್ವ ಮಹಿಳೆ ಆ ಬಟ್ಟೆ ಆಕೆಗೆ ತುಂಬಾ ಚೆನ್ನಾಗಿ ಕಾಣಿಸುತ್ತೆ. ಅದನ್ನ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುತ್ತಾಳೆ.

ಆಗ ಆಕೆ ’ನಾನು ಅಮ್ಮ ಆಗಿದ್ದೇನೆ. ನನ್ನ ದೇಹದಲ್ಲಿ ಆದ ಬದಲಾವಣೆಯಿಂದಾಗಿ ಈ ಬಟ್ಟೆ ನನಗೆ ಒಪ್ಪುವುದಿಲ್ಲ. ಹೆರಿಗೆ ಸಮಯದಲ್ಲಿ ಹೊಟ್ಟೆ ಮೇಲೆ ಆಗಿರುವ ಸ್ಟ್ರೆಚ್ ಮಾರ್ಕ್, ಬೊಜ್ಜು ಇವೆಲ್ಲ ಇದ್ದಾಗ. ಈ ಡ್ರೆಸ್ ಹಾಕಿಕೊಂಡರೆ. ತನಗೆ ಹಿತ ಎಂದು ಅನಿಸುವುದಿಲ್ಲ. ಬದಲಾಗಿ ನಾನು ಎಕ್ಸ್ ಎಲ್ ಬಟ್ಟೆಗಳನ್ನ ಹಾಕಿಕೊಳ್ಳುತ್ತೇನೆ’ ಎಂದು ಹೇಳುತ್ತಾಳೆ.

ಆಗ ಇನ್ನೊರ್ವ ಮಹಿಳೆ ಅದೇ ಡ್ರೆಸ್‌ನ್ನು ಹಾಕಿಕೊಂಡು ಆಕೆಯ ಮುಂದೆ ಬರುತ್ತಾಳೆ. ಆಕೆ ಕೂಡಾ ಕೆಲವೇ ಕೆಲವು ತಿಂಗಳ ಹಿಂದೆ ತಾಯಿಯಾಗಿರುತ್ತಾಳೆ. ಗರ್ಭಾವಸ್ಥೆಯ ನಂತರ ಸಹಜವಾಗಿ ಕೆಲ ಬದಲಾವಣೆಗಳಾಗಿರುತ್ತೆ. ಫ್ಯಾಶನ್ ಸೆನ್ಸ್ ಮತ್ತು ಬೇರೆ ಬೇರೆ ವಿಚಾರಗಳಲ್ಲಿ ಮಹಿಳೆ ಹೊಂದಿಕೊಳ್ಳುವುದು ಅನಿವಾರ್ಯ ಆಗಿರುತ್ತೆ. ನಾನು ಒಳಗಿನಿಂದ ಬದಲಾಗಿದ್ದನೆ. ನನ್ನ ಆತ್ಮವಿಶ್ವಾಸದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ ಎಂದು ಆಕೆ ಹೇಳುತ್ತಾಳೆ. ಈ ಮಾತುಗಳು ಸಬಲೀಕರಣದ ಮಾತಿನ ಅರ್ಥ ಕೊಡುತ್ತೆ.

ವೀಡಿಯೊವು ತಾಯಂದಿರ ಮಾನಸಿಕ ಆರೋಗ್ಯದ ಅಧ್ಯಯನದ ಫಲಿತಾಂಶಗಳನ್ನು ಹಂಚಿಕೊಂಡಿದೆ ಮತ್ತು 65% ಮಹಿಳೆಯರು ಹೆರಿಗೆಯ ನಂತರ ತಮ್ಮ ದೇಹದ ಬಗ್ಗೆ ನಕಾರಾತ್ಮಕ ಭಾವನೆಯನ್ನು ಹೊಂದಿದ್ದಾರೆಂದು ಪ್ರತಿಬಿಂಬಿಸುತ್ತದೆ. ಬ್ರ್ಯಾಂಡ್ ವೀಡಿಯೊವು ದೇಹದ ಸಕಾರಾತ್ಮಕತೆಯ ಬಲವಾದ ಸಂದೇಶದೊಂದಿಗೆ ಪ್ರಕರಣವನ್ನು ಹೈಲೈಟ್ ಮಾಡಿದೆ ಮತ್ತು ಇಂಟರ್ನೆಟ್ನಲ್ಲಿ ಹೃದಯಗಳನ್ನು ಗೆದ್ದಿದೆ. #MarkOfStrength ಅಡಿಯಲ್ಲಿ ಅಪ್‌ಲೋಡ್ ಮಾಡಿದ ಕೆಲವು ದಿನಗಳ ನಂತರ, Prega News ವೀಡಿಯೊ YouTube ನಲ್ಲಿ 6.5 ಮಿಲಿಯನ್ ವೀಕ್ಷಣೆಗಳನ್ನು ಆಕರ್ಷಿಸಿತು.

ನೆಟಿಜನ್‌ಗಳು ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸಲು ಮತ್ತು ಮಹಿಳೆಯ ಆದರ್ಶ ವ್ಯಕ್ತಿ ಅಥವಾ ಗಾತ್ರದ ದೃಷ್ಟಿಕೋನಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವ ಬ್ರ್ಯಾಂಡ್ ಅನ್ನು ಶ್ಲಾಘಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read