ಬೆಂಗಳೂರು : ಸಾಲು ಸಾಲು ವಿವಾದ…ದೂರುಗಳ ನಡುವೆಯೂ ನಟ ದರ್ಶನ್ ಪಾರ್ಟಿಯೊಂದರಲ್ಲಿ ಪತ್ನಿ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಬರ್ತ್ ಡೇ ಪಾರ್ಟಿಯಲ್ಲಿ ನಟ ದರ್ಶನ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ನಟ ದರ್ಶನ್ ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ದರ್ಶನ್ ಸ್ನೇಹಿತರು ಹುಟ್ಟುಹಬ್ಬವನ್ನು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಇದರ ನಡುವೆ ಬರ್ತ್ ಡೇ ಪಾರ್ಟಿಗಳೂ ನಡೆದಿವೆ. ಒಂದು ಪಾರ್ಟಿಯಲ್ಲಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಸಖತ್ ಡ್ಯಾನ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ದರ್ಶನ್ ತಮ್ಮ ಜನ್ಮ ದಿನಕ್ಕೆ ಪತ್ನಿ ವಿಜಯಲಕ್ಷ್ಮಿ ಮತ್ತು ವಿಜಯಲಕ್ಷ್ಮಿ ಅವರ ಸ್ನೇಹಿತರ ಜೊತೆಗೆ ಪಾರ್ಟಿ ಮಾಡಿದ್ದಾರೆ. ವಿಜಯಲಕ್ಷ್ಮಿ ಜೊತೆಗೆ ದಚ್ಚು ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ. ಈ ಒಂದು ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆಯತ್ತಿದೆ.
https://twitter.com/i/status/1761222731520159904
ಬಾಸ್ ಅತ್ತಿಗೆ 🤩❤️#DBOSS #Darshan #DBoss𓃰 #DevilTheHero #Devildboss @dasadarshan pic.twitter.com/7LLWi5fJRi
— Darshan Sena Samiti Mandya Thaluk 'R' (@teamMandyaTaluk) February 24, 2024

