ಕೆಲವರಿಗೆ ವಯಸ್ಸು ಅವರ ಕನಸಿಗೆ ಅಡ್ಡಿಯಾಗುವುದಿಲ್ಲ. ಇದನ್ನು ಸಾಬೀತು ಪಡಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಲೇ ಇರುತ್ತವೆ.
ಅಂಥದ್ದೇ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಕೇರ್ ಹೋಮ್ನಲ್ಲಿ ವಾಸಿಸುತ್ತಿರುವ 85 ವರ್ಷದ ವೃದ್ಧೆಯೊಬ್ಬರು ವಿಶ್ವದ ಅತ್ಯಂತ ವೇಗದ ಜಿಪ್ ಲೈನ್ನಲ್ಲಿ ಸವಾರಿ ಮಾಡಿ ದಾಖಲೆ ಮಾಡಿದ್ದಾರೆ.
ಸ್ಯಾಲಿದೇ ವೆಬ್ಸ್ಟರ್ ಎಂಬ ಮಹಿಳೆ ತಮ್ಮ ಮಗಳು ಜೂಲಿಯೆಟ್ ರೊಂದಿಗೆ 1.5 ಕಿಮೀ ಉದ್ದ ಮತ್ತು 500 ಅಡಿ ಎತ್ತರದ ಜಿಪ್ಲೈನ್ನಲ್ಲಿ ಹಾರಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಟ್ವಿಟ್ಟರ್ನಲ್ಲಿ ರಾಯಿಟರ್ಸ್ ಈ ವಿಡಿಯೋ ಶೇರ್ ಮಾಡಿಕೊಂಡಿದೆ.
ವೃದ್ಧೆಯು ರಕ್ಷಣಾತ್ಮಕ ಗೇರ್ ಮತ್ತು ಕನ್ನಡಕಗಳನ್ನು ಧರಿಸಿ, ಜಿಪ್-ಲೈನಿಂಗ್ ಮೇಲೆ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
ವೃದ್ಧೆಯ ಮಗಳು, 52 ವರ್ಷದ ಯೋಗ ಶಿಕ್ಷಕಿಯಾಗಿದ್ದು, ಪಕ್ಕದಲ್ಲಿ ಜಿಪ್-ಲೈನಿಂಗ್ ನಲ್ಲಿ ಅವರನ್ನೂ ಕಾಣಬಹುದು. ಈ ವಿಡಿಯೋಗೆ ಜನರು ಥರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿ ವೃದ್ಧೆಯನ್ನು ಅಭಿನಂದಿಸುತ್ತಿದ್ದಾರೆ.
An 85-year-old care home resident reached speeds of 100 mph as she zipped across the sky on what's said to be the fastest zipline in the world pic.twitter.com/E3leiwq3fn
— Reuters (@Reuters) February 17, 2023


