ಟ್ಯಾನ್ ನಿವಾರಣೆಯಾಗಬೇಕೆ…..? ನಟಿ ಪ್ರಿಯಾಂಕ ಚೋಪ್ರಾ ಹೇಳಿದ ಈ ಟಿಪ್ಸ್ ಟ್ರೈ ಮಾಡಿ ನೋಡಿ….!

ಬಿಸಿಲಿನ ತಾಪಕ್ಕೆ ಹೊರಗಡೆ ಹೋದಾಗ ನಮ್ಮ ಚರ್ಮ ಬಹಳ ಬೇಗನೆ ಟ್ಯಾನ್ ಆಗುತ್ತದೆ. ಇದರಿಂದ ಚರ್ಮದ ಕಾಂತಿ ಕಳೆಗುಂದುತ್ತದೆ. ಹಾಗಾಗಿ ಈ ಚರ್ಮದ ಟ್ಯಾನ್ ಅನ್ನು ನಿವಾರಿಸಿಕೊಳ್ಳುವುದು ಅಗತ್ಯ. ಆದರೆ ನಟಿ ಪ್ರಿಯಾಂಕ ಚೋಪ್ರಾ ಅವರು ಟ್ಯಾನ್ ಅನ್ನು ನಿವಾರಿಸಲು ಈ ಸ್ಕ್ರಬ್ ಬಳಸುತ್ತಾರಂತೆ. ಅದರ ಬಗ್ಗೆ ತಿಳಿಯಿರಿ.

ನಟಿ ಪ್ರಿಯಾಂಕ ಚೋಪ್ರಾ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುತ್ತಾರೆ. ಅದರಂತೆ ಇದೀಗ ಅವರು ತಮ್ಮ ಅಭಿಮಾನಿಗಳಿಗಾಗಿ ಟ್ಯಾನ್ ನಿವಾರಣಾ ಸ್ಕ್ರಬ್ ಬಗ್ಗೆ ತಿಳಿಸಿದ್ದಾರೆ. ಇದರಲ್ಲಿ ನಟಿ ನಿಂಬೆಯನ್ನು ಬಳಸಿದ್ದಾರೆ. ಇದು ಚರ್ಮವನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆಯಂತೆ.

ಹಾಗಾಗಿ ನಟಿ ಈ ಬಾಡಿ ಸ್ಕ್ರಬ್ ಗೆ ½ ನಿಂಬೆ, ಅರ್ಧ ಕಪ್ ಕಡಲೆ ಹಿಟ್ಟು, 2 ಚಮಚ ಮೊಸರು, 3-4 ಚಮಚ ಹಾಲು, 1 ಚಮಚ ಶ್ರೀಗಂಧದ ಪುಡಿ ಮತ್ತು ಒಂದು ಚಿಟಿಕೆ ಅರಿಶಿನವನ್ನು ತೆಗೆದುಕೊಂಡು ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ಕ್ರಬ್ ತಯಾರಿಸಿದ್ದಾರೆ.

ಈ ಸ್ಕ್ರಬ್ ಅನ್ನು ಮುಖ ಮತ್ತು ದೇಹ ಎರಡಕ್ಕೂ ಹಚ್ಚಬಹುದಂತೆ. ನಂತರ 10 ನಿಮಿಷ ಬಿಟ್ಟು ವಾಶ್ ಮಾಡಿದರೆ ಅದರ ಫಲಿತಾಂಶ ನಿಮಗೆ ತಕ್ಷಣವೇ ಸಿಗುತ್ತದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read