ನಿಮ್ಮ ಆಗಮನಕ್ಕೆ ಎದುರು ನೋಡುತ್ತಿದ್ದೇವೆ; ರಿಷಬ್‌ ಪಂತ್‌ ಗೆ ಭಜ್ಜಿ ಭಾವುಕ ಪೋಸ್ಟ್‌

ಭೀಕರ ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಎಸ್. ಶ್ರೀಶಾಂತ್ ಭೇಟಿ ಮಾಡಿದ್ದಾರೆ. ಈ ಬಗ್ಗೆ ಮೂವರು ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದು ಪಂತ್ ಚೇತರಿಕೆಗೆ ಶುಭ ಕೋರಿದ್ದಾರೆ.

ರಿಷಬ್ ಪಂತ್ ಡಿಸೆಂಬರ್‌ನಲ್ಲಿ ಘಟಿಸಿದ ಭೀಕರ ಕಾರು ಅಪಘಾತದಿಂದಾಗಿ ಕನಿಷ್ಠ ಒಂದು ವರ್ಷದವರೆಗೆ ಎಲ್ಲಾ ಪ್ರಮುಖ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ.

“ನೀವು ಎದುರಿಸುವ ಯಾವುದೇ ಅಡೆತಡೆಗಿಂತ ಅತಿದೊಡ್ಡ ಅಂಶ ನಿಮ್ಮೊಳಗೆ ಇದೆ ಎಂದು ನಂಬಿರಿ ಮತ್ತು ತಿಳಿಯಿರಿ. ನಿಮ್ಮನ್ನು ನೋಡುತ್ತಿರುವುದು ಒಳ್ಳೆಯದು ಚೋಟೆ ಭಾಯ್. ನಿಮ್ಮ ಕಮ್‌ಬ್ಯಾಕ್‌ಗಾಗಿ ಕಾಯುತ್ತಿದ್ದೇನೆ ಎಂದು ಹರ್ಭಜನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಋತುವಿನಲ್ಲಿ ಪಂತ್ ಹೊರಗುಳಿಯುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್ ಅವರನ್ನು ನಾಯಕನನ್ನಾಗಿ ಮತ್ತು ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ಉಪನಾಯಕನನ್ನಾಗಿ ಘೋಷಿಸಿದೆ.

ಡಿಸೆಂಬರ್ 30 ರಂದು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ತನ್ನ ಹುಟ್ಟೂರಾದ ರೂರ್ಕಿಗೆ ತೆರಳುತ್ತಿದ್ದಾಗ ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಅಂದಿನಿಂದ ರಿಷಬ್ ಪಂತ್ ಕ್ರಿಕೆಟ್ ನಿಂದ ಹೊರಗುಳಿದಿದ್ದು, ಮೊದಲ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.

https://twitter.com/harbhajan_singh/status/1639869313199865857

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read