ಬೆಂಗಳೂರು: ಆಕಾಶ ಮಂಡಲದಲ್ಲಿ ಅತ್ಯಂತ ಅಪರೂಪದ ಹಾಗೂ ಸಕಾರಾತ್ಮಕ ಗ್ರಹಗತಿಗಳ ಬದಲಾವಣೆ ಸಂಭವಿಸುತ್ತಿದೆ. ಇಂದುಒಂದೇ ದಿನ ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿರುವ ವ್ಯಾಘಾತ ಯೋಗ ಮತ್ತು ಧ್ರುವ ಯೋಗ ಒಟ್ಟಿಗೆ ಸೃಷ್ಟಿಯಾಗುತ್ತಿವೆ. ಇದರ ಜೊತೆಗೆ ಬುದ್ಧಿಕಾರಕನಾದ ಬುಧ ಗ್ರಹದ ಉದಯವೂ ಆಗುತ್ತಿರುವುದರಿಂದ ನಾಳೆಯ ದಿನದ ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯ ಮಹತ್ವ ಡಬಲ್ ಆಗಿದೆ.
ಈ ಸಾಲು ಸಾಲು ಶುಭ ಯೋಗಗಳ ನೇರ ಪ್ರಭಾವ ಹಾಗೂ ಕರ್ಮಫಲ ದಾತ ಶನಿ ದೇವನ ವಿಶೇಷ ಅನುಗ್ರಹದಿಂದಾಗಿ ಇಂದು ಕೆಲವು ರಾಶಿಗಳ ಜಾತಕದ ದರಿದ್ರ ಯೋಗ ಕಳೆದು, ಅದೃಷ್ಟದ ಬಾಗಿಲು ತೆರೆಯಲಿದೆ. ಆ ರಾಶಿಗಳು ಯಾವುವು? ಶನಿವಾರದ ಕಂಪ್ಲೀಟ್ ಭವಿಷ್ಯ ಇಲ್ಲಿದೆ
ಅದೃಷ್ಟ ಖುಲಾಯಿಸಲಿರುವ ಆ 5 ರಾಶಿಗಳು ಇವೇ ನೋಡಿ:
ವೃಷಭ ರಾಶಿ (Taurus): ನಾಳೆ ನಿಮಗೆ ಫುಲ್ ಪಾಸಿಟಿವ್ ದಿನ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೈಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಸಿಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭದ ಜೊತೆಗೆ ಹೊಸ ಅವಕಾಶಗಳು ಸಿಗಲಿವೆ. ಆರೋಗ್ಯ ಉತ್ತಮವಾಗಿದ್ದು, ಕೌಟುಂಬಿಕ ಸಾಮರಸ್ಯ ಮೂಡಲಿದೆ.
ಕಟಕ ರಾಶಿ (Cancer): ಆದಾಯ ಹೆಚ್ಚಿಸಲು ಹೊಸ ಮಾರ್ಗಗಳು ಗೋಚರಿಸಲಿವೆ. ಹಳೆಯ ಆರ್ಥಿಕ ಸಮಸ್ಯೆಗಳಿಗೆ ನಾಳೆ ಮುಕ್ತಿ ಸಿಗಲಿದ್ದು, ಹಣಕಾಸಿನ ಸ್ಥಿತಿ ಭದ್ರವಾಗಲಿದೆ. ಆಫೀಸ್‌ನಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಭರ್ಜರಿ ಪ್ರಶಂಸೆ ಸಿಗಲಿದ್ದು, ವೃತ್ತಿ ಜೀವನದಲ್ಲಿ ದೊಡ್ಡ ಪ್ರಗತಿ ಕಾಣಲಿದ್ದೀರಿ.
ಕನ್ಯಾ ರಾಶಿ (Virgo): ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಅಪೂರ್ಣ ಕೆಲಸಗಳು ಸಲೀಸಾಗಿ ಪೂರ್ಣಗೊಳ್ಳಲಿವೆ. ಆರೋಗ್ಯದಲ್ಲಿ ಭಾರಿ ಸುಧಾರಣೆ ಕಂಡುಬರಲಿದ್ದು, ಹೊಸ ಜೋಶ್ ಮೂಡಲಿದೆ. ಕರಿಯರ್‌ಗೆ ಸಂಬಂಧಿಸಿದಂತೆ ನಾಳೆ ಮಹತ್ವದ ತಿರುವು ಸಿಗಲಿದ್ದು, ಕಠಿಣ ಶ್ರಮಕ್ಕೆ ತಕ್ಕ ಬಂಪರ್ ಫಲ ಸಿಗಲಿದೆ.
ವೃಶ್ಚಿಕ ರಾಶಿ (Scorpio): ನಾಳೆ ನಿಮಗೆ ‘ಹಠಾತ್ ಧನಲಾಭ’ದ (Sudden Wealth) ಅದ್ಭುತ ಯೋಗವಿದೆ ಹೊಸ ಮನೆ ಅಥವಾ ವಾಹನ ಖರೀದಿಸುವ ನಿಮ್ಮ ಕನಸು ನನಸಾಗಲು ಕಾಲ ಕೂಡಿಬರಲಿದೆ. ಆದಾಯದಲ್ಲಿ ಭಾರಿ ವೃದ್ಧಿಯಾಗಲಿದ್ದು, ಪ್ರೀತಿಯ ಜೀವನ ಮತ್ತು ಸ್ನೇಹಿತರ ವಲಯದಿಂದ ಸಕಾರಾತ್ಮಕ ಬೆಂಬಲ ಸಿಗಲಿದೆ.
ಕುಂಭ ರಾಶಿ (Capricorn): ಶನಿ ದೇವನ ಸ್ವಕ್ಷೇತ್ರದ ರಾಶಿಯಾದ್ದರಿಂದ ನಾಳೆ ಅಖಂಡ ಯಶಸ್ಸು ನಿಮ್ಮದಾಗಲಿದೆ. ಶುಭ ಯೋಗಗಳ ಪ್ರಭಾವದಿಂದ ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂಗಾತಿಯೊಂದಿಗಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದ್ದು, ಪ್ರೀತಿಯ ಜೀವನ ರೋಮ್ಯಾಂಟಿಕ್ ಆಗಿರಲಿದೆ.
ಶನಿ ದೇವರ ವಿಶೇಷ ಜ್ಯೋತಿಷ್ಯ ಪರಿಹಾರಗಳು (Astrology Remedies):
ನಾಳೆ ಶನಿವಾರ ಈ ಯೋಗಗಳ ಸಮಯದಲ್ಲಿ ಕೆಳಗಿನ ಸರಳ ಪರಿಹಾರಗಳನ್ನು ಮಾಡುವುದರಿಂದ ಜಾತಕದಲ್ಲಿ ಶನಿ ಗ್ರಹ ಬಲಗೊಂಡು, ಶನಿದೇವನ ವಿಶೇಷ ಕೃಪೆ ಸಿಗಲಿದೆ:
ಶನಿ ದೇವಸ್ಥಾನಕ್ಕೆ ಭೇಟಿ: ಇಂದು ಸಂಜೆ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಎಳ್ಳೆಣ್ಣೆಯ ದೀಪವನ್ನು ಹಚ್ಚಿ.
ದಾನ ಧರ್ಮ: ಕಡುಬಡವರಿಗೆ ಅಥವಾ ಅಗತ್ಯವಿರುವವರಿಗೆ ಕಪ್ಪು ಕಡಲೆ, ಕಪ್ಪು ಕಂಬಳಿ ಅಥವಾ ಧಾನ್ಯಗಳನ್ನು ದಾನ ಮಾಡಿ.
ಹನುಮಾನ್ ಚಾಲೀಸಾ: ಇಂದು ಹನುಮಂತನ ಆರಾಧನೆ ಮಾಡುವುದರಿಂದ ಮತ್ತು ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೋಷಗಳು ತಕ್ಷಣ ನಿವಾರಣೆಯಾಗುತ್ತವೆ.

