ಮತದಾರರಿಗೆ ಗುಡ್ ನ್ಯೂಸ್: ವೋಟ್ ಹಾಕಿದವರಿಗೆ ವಂಡರ್ ಲಾದಲ್ಲಿ ಶೇ. 15 ರಷ್ಟು ರಿಯಾಯಿತಿ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅನೇಕ ಸಂಸ್ಥೆಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಮತ್ತು ಮತದಾನ ಉತ್ತೇಜಿಸುವ ನಿಟ್ಟಿನಲ್ಲಿ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ವಿಶೇಷ ರಿಯಾಯಿತಿ ಘೋಷಿಸಿದೆ.

ಮೇ 10 ರಂದು ಮತದಾನ ಮಾಡುವ ನಾಗರಿಕರಿಗೆ ವಂಡರ್ ಲಾ ಪ್ರವೇಶ ಶುಲ್ಕದಲ್ಲಿ ಶೇಕಡ 15ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಮೇ 10 ರಿಂದ 12 ರವರೆಗೆ ಆನ್ಲೈನ್ ಬುಕ್ಕಿಂಗ್ ನಲ್ಲಿ ಈ ಕೊಡುಗೆ ಲಭ್ಯವಿರುತ್ತದೆ. ಇಂದು ಬುಕಿಂಗ್ ತೆರೆಯಲಿದ್ದು, www.wonderland.com ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿ ಆಫರ್ ಪಡೆಯಬಹುದು. ಮಾಹಿತಿಗಾಗಿ 80372 30333 ಸಂಪರ್ಕಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read