HomeKarnatakaವರ್ಜಿನ್ ಅಟ್ಲಾಂಟಿಕ ವಿಮಾನದಲ್ಲಿ ತಾಂತ್ರಿಕ ದೋಷ: ತುಮಕೂರು ಬಳಿ ಆಗಸದಲ್ಲಿ ಗಿರಕಿ ಹೊಡೆದು ಬೆಂಗಳೂರು ಏರ್...

ವರ್ಜಿನ್ ಅಟ್ಲಾಂಟಿಕ ವಿಮಾನದಲ್ಲಿ ತಾಂತ್ರಿಕ ದೋಷ: ತುಮಕೂರು ಬಳಿ ಆಗಸದಲ್ಲಿ ಗಿರಕಿ ಹೊಡೆದು ಬೆಂಗಳೂರು ಏರ್ ಪೊರ್ಟ್ ಗೆ ವಾಪಸ್

ತುಮಕೂರು: ವರ್ಜಿನ್ ಅಟ್ಲಾಂಟಿಕ ಏರ್ ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ತುಮಕೂರು ಬಳಿ ಆಗಸದಲ್ಲಿ ಗಿರಿಕಿ ಹೊಡೆದ ಘಟನೆ ನಡೆದಿದೆ. ಬಳಿಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದೆ.

ಲಂಡನ್‌ಗೆ ಹೊರಟಿದ್ದ ವರ್ಜಿನ್ ಅಟ್ಲಾಂಟಿಕ ಏರ್‌ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ ಈ ಘಟನೆ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ತುಮಕೂರು ಬಳಿ ಆಗಸದಲ್ಲಿ ವಿಮಾನ ಗಿರಕಿ ಹೊಡೆದು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿ ತುರ್ತು ಭೂಸ್ಪರ್ಶ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಬೆಳಗ್ಗೆ 8:20ಕ್ಕೆ 270ಪ್ರಯಾಣಿಕರನ್ನ ಹೊತ್ತು ಕೆಐಎಬಿಯಿಂದ ಲಂಡನ್ ಗೆ ವಿಮಾನ ಟೇಕ್‌ ಆಫ್‌ ಆಗಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅರ್ಧಗಂಟೆಗೂ ಅಧಿಕ ಕಾಲ ತುಮಕೂರು ಬಳಿ ಆಗಸದಲ್ಲೇ ವಿಮಾನ ಗಿರಕಿ ಹೊಡೆದಿದೆ. ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಸ್‌ ಆಗಿದ್ದು ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಘಟನೆ ಬಗ್ಗೆ ವಿಮಾನ ಸಿಬ್ಬಂದಿ ವಿಮಾನವನ್ನು ಪರಿಶೀಲನೆ ನಡೆಸಿದ್ದು, ತಾಂತ್ರಿಕ ದೋಷ ಸರಿಪಡಿಸುತ್ತಿದ್ದಾರೆ. ಘಟನೆಯಿಂದ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

ಟಾರ್ಚ್ ಬೆಳಕಿನಲ್ಲಿ ಸರ್ಕಾರಿ ಬಸ್ ಪ್ರಯಾಣ: ಕಾಂಗ್ರೆಸ್​​ ಸರ್ಕಾರಕ್ಕೆ ಜನಸಾಮಾನ್ಯರ ಭದ್ರತೆಯ ಬಗ್ಗೆ ಕನಿಷ್ಠ ಕಾಳಜಿಯಾದರೂ ಇದೆಯೇ? ಆರ್.ಅಶೋಕ್ ಪ್ರಶ್ನೆ

ಬೆಂಗಳೂರು: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಸರ್ಕಾರಿ ಬಸ್ ಪ್ರಯಾಣ. ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆಯ ನಿರ್ಲಕ್ಷ್ಯಕ್ಕೆ ಇದಕ್ಕಿಂತ ದೊಡ್ದ ಉದಾಹರಣೆ ಬೇಕೆ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಕಲಬುರ್ಗಿಯಿಂದ ಚಿಂಚೋಳಿಗೆ ಪ್ರಯಾಣಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನ ಹೆಡ್ ಲೈಟ್ ಕೆಟ್ಟುಹೋಗಿ ಬೊಮೈಲ್ ಫೋನ್ ಟಾರ್ಚ್ ಬೆಳಕಿನಲ್ಲಿ ಚಾಲಕ ಬಸ್ ಚಲಾಯಿಸುವ ಪರಿಸ್ಥಿತಿ ಬಂದೊದಗಿತ್ತು. ಈ ಘಟನೆ ಮಾಸುವ ಮುನ್ನವೇ ಧಾರವಾಡ ಜಿಲ್ಲೆಯ ಕುಂದಗೋಳದಲ್ಲೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (NWKRTC) ಬಸ್‌ನ ಹೆಡ್‌ಲೈಟ್ ಕೈಕೊಟ್ಟು, ಕತ್ತಲಿನಲ್ಲಿ ಮೊಬೈಲ್ ಟಾರ್ಚ್ ಆಸರೆಯಲ್ಲೇ ಚಾಲಕ ಪ್ರಯಾಣಿಕರನ್ನು ತಲುಪಿಸಬೇಕಾಯಿತು. ಪ್ರಯಾಣಿಕರ ಜೀವವನ್ನು ಪಣಕ್ಕಿಟ್ಟು ಬಸ್ಸುಗಳನ್ನು ರಸ್ತೆಗೆ ಇಳಿಸುತ್ತಿರುವ ಈ ನಾಲಾಯಕ್ ಕಾಂಗ್ರೆಸ್​​ ಸರ್ಕಾರಕ್ಕೆ ಜನಸಾಮಾನ್ಯರ ಭದ್ರತೆಯ ಬಗ್ಗೆ ಕನಿಷ್ಠ ಕಾಳಜಿಯಾದರೂ ಇದೆಯೇ? ಎಂದವರು ಪ್ರಶ್ನಿಸಿದ್ದಾರೆ.

ಧಾರವಾಡ ಜಿಲ್ಲಾ ಉಸ್ತುವಾರ ಸಚಿವರಾಗಿರುವ ಸಂತೋಷ್​​ ಲಾಡ್​​ ಅವರೇ, ನಿಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಇಷ್ಟು ದಯನೀಯವಾಗಿದೆ. ಮೈಕು ಸಿಕ್ಕರೆ ಸಾಕು ದೇಶ-ವಿದೇಶದ ಉಸಾಬರಿ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ನಿಮಗೆ ಜನಸಾಮಾನ್ಯರಿಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಏಕೆ ಸಾಧ್ಯವಾಗುತ್ತಿಲ್ಲ? ಸಾರಿಗೆ ಸಚಿವ ಭೈರತಿ ಸುರೇಶ್​​ ಅವರೇ, ಬಸ್ಸುಗಳ ಸೂಕ್ತ ನಿರ್ವಹಣೆ ಇಲ್ಲದೆ ಚಾಲಕರು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ. ನಿಮ್ಮ ದಿವಾಳಿ ಆಡಳಿತಕ್ಕೆ ಜನರು ಪ್ರಾಣಾಪಾಯಕ್ಕೆ ಸಿಲುಕಬೇಕೆ? ಎಂದು ಕಿಡಿಕಾರಿದ್ದಾರೆ.

ಸಿಎಂ ಡಿಕೆ ಶಿವಕುಮಾರ್​​ ಅವರೇ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ನೀಡಿದ ಮಾತ್ರಕ್ಕೆ ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ? ಉಚಿತ ಪ್ರಯಾಣ ನೀಡುತ್ತಿದ್ದೇವೆ ಎಂಬ ನೆಪದಲ್ಲಿ ಕನಿಷ್ಠ ರಕ್ಷಣೆ ಇಲ್ಲದ ಬಸ್ಸುಗಳನ್ನು ನೀಡಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದೀರಾ? ಎಂದು ಅಶೋಕ್​​ ಪ್ರಶ್ನಿಸಿದ್ದಾರೆ.

ಕೂಡಲೇ ಹಾಳಾಗಿರುವ ಎಲ್ಲಾ ಸಾರಿಗೆ ಬಸ್ಸುಗಳನ್ನು ತಪಾಸಣೆಗೊಳಪಡಿಸಿ, ದುರಸ್ತಿಪಡಿಸಬೇಕು. ಇಲ್ಲವಾದಲ್ಲಿ ಈ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದವರು ಖಡಕ್​​ ಎಚ್ಚರಿಕೆಯನ್ನೂ ನೀಡಿದ್ದಾರೆ.

ಹುಬ್ಬಳ್ಳಿಯಿಂದ ಅತ್ತಿಗೇರಿಗೆ ಹೊರಟಿದ್ದ ಬಸ್​​ನ ಹೆಡ್‌ಲೈಟ್ ತಾಂತ್ರಿಕ ದೋಷದಿಂದ ಕುಂದಗೋಳ ತಾಲೂಕಿನ ಸಂಶಿ ಬಳಿ ಬಂದ್​​ ಆಗಿತ್ತು. ಪ್ರಯಾಣಿಕರನ್ನು ಅರ್ಧಕ್ಕೆ ಇಳಿಸಲು ಸಾಧ್ಯವಾಗದ ಕಾರಣ, ಪ್ರಯಾಣಿಕರ ಮೊಬೈಲ್​​ ಟಾರ್ಚ್‌ ಬೆಳಕಿನಲ್ಲಿ ಚಾಲಕ ಸಂಶಿಯಿಂದ ಗುಡಗೇರಿ, ಅತ್ತಿಗೇರಿವರೆಗೆ ಬಸ್ ಚಲಾಯಿಸಿದ್ದರು. ಸಾಮಾನ್ಯವಾಗಿ 15-20 ನಿಮಿಷಗಳಲ್ಲಿ ತಲುಪುವ ಈ ಮಾರ್ಗವನ್ನು, ಚಾಲಕ ಒಂದೂವರೆ ಗಂಟೆ ಸಮಯ ತೆಗೆದುಕೊಂಡು ನಿಧಾನವಾಗಿ ಚಲಾಯಿಸಿ, ಪ್ರತಿಯೊಬ್ಬ ಪ್ರಯಾಣಿಕರನ್ನು ಅವರ ಗ್ರಾಮಗಳಿಗೆ ಸುರಕ್ಷಿತವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular