Watch Video | ಸೆಲ್ಫಿಗಾಗಿ ಅನುಷ್ಕಾಗೆ ತೀರಾ ಹತ್ತಿರ ಬಂದ ಅಭಿಮಾನಿ; ವಿರಾಟ್‌ ಕೊಹ್ಲಿ ಗರಂ

ಬೆಂಗಳೂರಿನ ಜನಪ್ರಿಯ ಸೆಂಟ್ರಲ್ ಟಿಫಿನ್ ರೂಮ್‌ನಲ್ಲಿ ಉಪಹಾರ ಸವಿಯಲು ಭಾರತ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ತೆರಳಿದ್ದರು.

ಈ ಸುದ್ದಿ ತಿಳಿಯುತ್ತಲೇ, ಮಲ್ಲೇಶ್ವರದ ಆ ಪ್ರದೇಶದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ಕ್ರಿಕೆಟರ್‌ನನ್ನು ಕಾಣಲು ದೊಡ್ಡ ಸಂಖ್ಯೆಯಲ್ಲಿ ಸಿಟಿಆರ್‌ ಎದುರು ನೆರೆದಿದ್ದಾರೆ. ವಿರಾಟ್‌ರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಅಪಾರವಾಗಿ ಅಭಿಮಾನಿಗಳು ಮುಗಿಬಿದ್ದ ಕಾರಣ ವಿರಾಟ್‌ಗೂ ಇದು ಕಿರಿಕಿರಿ ತಂದೊಡ್ಡಿದೆ.

ಹೋಟೆಲ್‌ನಲ್ಲಿ ಉಪಹಾರ ಸೇವಿಸಿ, ಕಾರಿನೊಳಗೆ ಕೂರಲು ಬಂದ ವಿರಾಟ್‌ ಹಾಗೂ ಅನುಷ್ಕಾರ ಸೆಲ್ಫೀ ತೆಗೆಯಲು ಅವರಿಗೆ ತೀರಾ ಹತ್ತಿರ ಬಂದ ಅಭಿಮಾನಿಯೊಬ್ಬ, ತೀರಾ ಕಾರಿನ ಬಾಗಿಲ ಬಳಿ ನಿಂತ ಕಾರಣ ವಿರಾಟ್‌ಗೆ ಕೊಂಚ ಕಿರಿಕಿರಿ ಅನುಭವವಾಗಿದೆ.

ತಾರಾ ದಂಪತಿಗಳು ತಮ್ಮ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟ ಖುಷಿಯ ಸಂದರ್ಭದ ಚಿತ್ರಗಳನ್ನು ಸೆರೆ ಹಿಡಿದ ಸಿಟಿಆರ್‌ ಸಿಬ್ಬಂದಿ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ರೆಸ್ಟೋರೆಂಟ್‌ ಪ್ರೊಫೈಲ್‌ನಲ್ಲಿ ಈ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

https://twitter.com/KohlifiedGal/status/1649713520949481474?ref_src=twsrc%5Etfw%7Ctwcamp%5Etweetembed%7Ctw

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read