ಪ್ರೀತಿಗಿಂತ ಹಣವೇ ಮುಖ್ಯವಾಯಿತೇ ಎಂಬ ಚರ್ಚೆಗೆ ಕಾರಣವಾಗುವ ಘಟನೆವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕನನ್ನು ಬಿಟ್ಟು, ಐಷಾರಾಮಿ ಜೀವನದ ಆಸೆಯಿಂದ 69 ವರ್ಷದ ಕೋಟ್ಯಾಧಿಪತಿ ವೃದ್ಧನನ್ನು ಯುವತಿ ಮದುವೆಯಾಗಿದ್ದಾಳೆ ಎನ್ನಲಾಗಿದೆ. ಮದುವೆ ಮಂಟಪದಲ್ಲೇ ಪ್ರಿಯತಮ ಪ್ರಶ್ನಿಸಿದಾಗ, ಆಕೆ ನೀಡಿದ ಉತ್ತರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಾಲ್ಕು ವರ್ಷಗಳಿಂದ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರಿಯತಮನನ್ನು ಬಿಟ್ಟು, ಕೋಟ್ಯಂತರ ಆಸ್ತಿಯ ಒಡೆಯನಾಗಿರುವ 69 ವರ್ಷದ ವೃದ್ಧನನ್ನು ಯುವತಿ ಮದುವೆಯಾಗಿದ್ದಾಳೆ.ಈ ಘಟನೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಏನಿದು ಘಟನೆ..?
ಒಬ್ಬ ಯುವಕ ಮತ್ತು ಯುವತಿ ಒಟ್ಟಿಗೆ ಓದುತ್ತಿದ್ದ ವೇಳೆ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಇವರ ಪ್ರೇಮಕಥೆ ಸುಗಮವಾಗಿ ಸಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಆ ಯುವತಿಗೆ 69 ವರ್ಷದ ಅವಿವಾಹಿತ ವೃದ್ಧನ ಪರಿಚಯವಾಗಿದೆ. ಅವರ ಐಷಾರಾಮಿ ಬಂಗಲೆಗಳು, ಲಕ್ಸುರಿ ಕಾರುಗಳು ಮತ್ತು ಕೋಟ್ಯಂತರ ಆಸ್ತಿಯನ್ನು ನೋಡಿ ಯುವತಿ ಆಕರ್ಷಿತಳಾಗಿದ್ದಾಳೆ. ಹೀಗಾಗಿ ಆ ವೃದ್ಧನನ್ನೇ ಮದುವೆಯಾಗುವುದಾಗಿ ಮನೆಯವರಿಗೆ ಸ್ಪಷ್ಟವಾಗಿ ಹೇಳಿದ್ದಾಳೆ. ವಯಸ್ಸಿನಲ್ಲಿ ಇಷ್ಟೊಂದು ವ್ಯತ್ಯಾಸವಿದ್ದ ಕಾರಣ ಕುಟುಂಬಸ್ಥರು ತೀವ್ರವಾಗಿ ವಿರೋಧಿಸಿದರೂ, ಯುವತಿ ತನ್ನ ನಿರ್ಧಾರದಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಕೊನೆಗೆ ಮದುವೆಗೆ ಒಪ್ಪಿಕೊಳ್ಳಬೇಕಾಯಿತು.
ಮದುವೆ ಮಂಟಪಕ್ಕೆ ಪ್ರಿಯತಮನ ಎಂಟ್ರಿ..
ಮದುವೆಯ ದಿನ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಿಯತಮ ನೇರವಾಗಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾನೆ. “ನಾಲ್ಕು ವರ್ಷಗಳಿಂದ ನನ್ನನ್ನು ಪ್ರೀತಿಸುತ್ತಿದ್ದೆ. ಈಗ ಈ ವಯಸ್ಸಾದ ವ್ಯಕ್ತಿಯನ್ನು ಹೇಗೆ ಮದುವೆಯಾಗುತ್ತಿದ್ದೀಯ?” ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಯುವತಿ ಎಲ್ಲರ ಮುಂದೆಯೇ ಯಾವುದೇ ಸಂಕೋಚವಿಲ್ಲದೆ ಉತ್ತರಿಸಿದ್ದಾಳೆ.. “ನಿನ್ನ ಬಳಿ ಏನಿದೆ ಎಂದು ನಿನ್ನನ್ನು ಮದುವೆಯಾಗಬೇಕು? ನನ್ನನ್ನು ಕರೆದುಕೊಂಡು ಹೋಗಿ ಗುಡಿಸಲಿನಲ್ಲಿ ಇಡುತ್ತೀಯಾ? ಆದರೆ ಇವರು ನನ್ನನ್ನು ಅರಮನೆಯಲ್ಲಿ ರಾಣಿಯಂತೆ ನೋಡಿಕೊಳ್ಳುತ್ತಾರೆ. ನಿನ್ನಂತಹ ಬಡವನೊಂದಿಗೆ ಈಗಾಗಲೇ ನಾಲ್ಕು ವರ್ಷಗಳನ್ನು ವ್ಯರ್ಥ ಮಾಡಿದ್ದೇನೆ.. ಇನ್ನು ಮುಂದೆ ನನ್ನ ಜೀವನವನ್ನು ಹಾಳುಮಾಡಿಕೊಳ್ಳಲು ಸಾಧ್ಯವಿಲ್ಲ. ನೀನು ಹೋಗಿ ನಿನ್ನ ಮಟ್ಟಕ್ಕೆ ತಕ್ಕ ಯಾವುದಾದರೂ ಬಡ ಹುಡುಗಿಯನ್ನು ನೋಡಿ ಮದುವೆಯಾಗು” ಎಂದು ಖಡಕ್ ಆಗಿ ಹೇಳಿದ್ದಾಳೆ.
ಪ್ರಸ್ತುತ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ನಿಜವಾದ ಪ್ರೀತಿಗಿಂತ ಹಣವೇ ಮುಖ್ಯ ಎಂದುಕೊಳ್ಳುವುದು ಸರಿಯಾದ ನಿರ್ಧಾರವೇ? ಅಥವಾ ಕೇವಲ ಸ್ವಾರ್ಥದ ಚಿಂತನೆಯೇ? ಎಂಬುದರ ಕುರಿತು ನೆಟಿಜನ್‌ಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

