ಹೆಂಡತಿಯಿಂದ ತಪ್ಪಿಸಿಕೊಳ್ಳೋಕೆ ಓಡ್ತಿದ್ದ ಪತಿ, ಬೆಕ್ಕನ್ನ ಬೆನ್ನಟ್ಟಿದ್ದ ನಾಯಿ, ಪೊಲೀಸರಿಂದ ಎಸ್ಕೆಪ್ ಆದ ಕಳ್ಳ;1 ಸಿಸಿಟಿವಿ, 3 ಘಟನೆ ಸೆರೆ

ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಸೋಶಿಯಲ್‌ ಮೀಡಿಯಾ, ಒಮ್ಮೆ ಒಪನ್ ಮಾಡಿದ್ರೆ ಸಾಕು, ವೆರೈಟಿ-ವೆರೈಟಿ ವಿಡಿಯೋಗಳು ಒಂದಾದ ಮೇಲೆ ಒಂದು ಕಣ್ಣುಂದೆ ಬಂದು ಬಿಡುತ್ತೆ. ಕೆಲ ವಿಡಿಯೋಗಳು ಶಾಕಿಂಗ್ ಆದ್ರೆ, ಇನ್ನೂ ಕೆಲ ವಿಡಿಯೋಗಳು ಫನ್ನಿ ಆಗಿರುತ್ತೆ. ಇದರ ಹೊರತಾಗಿ ಕೆಲ ವಿಡಿಯೋಗಳು ನೋಡ್ತಿದ್ರೆ ಫುಲ್ ಕನ್ಫ್ಯೂಸ್ ಮಾಡುವ ಹಾಗಿರುತ್ತೆ. ಉಲ್ಟಾ ಅದ್ಹೇಗೆ ಸಾಧ್ಯ ಅನ್ನುವ ಹಾಗಿರುತ್ತೆ. ಅಂತಹದ್ದೇ ವಿಡಿಯೋ ಒಂದು ಇತ್ತಿಚೆಗೆ ವೈರಲ್ ಆಗಿದೆ.

ಇಲ್ಲಿ ನೋಡಿ ಸಿಸಿ ಟಿವಿಯೊಂದರಲ್ಲಿ ರೆಕಾರ್ಡ್ ಆದ ದೃಶ್ಯ. ಒಂದು ಸಿಸಿ ಟಿವಿಯಲ್ಲಿ ಮೂರು ಘಟನೆಗಳನ್ನ ಗಮನಿಸಬಹುದು. ಮೊದಲಿಗೆ ರಸ್ತೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಓಡೋದನ್ನ ನೋಡಬಹುದು. ಆಗಲೇ ಆತನನ್ನ ಹಿಮ್ಮೆಟ್ಟಿಕೊಂಡು ಹೆಂಡತಿ ಓಡಿ ಬರ್ತಾಳೆ.

ಆ ನಂತರ ನಾಯಿಯೊಂದು ಬೆಕ್ಕನ್ನ ಬೆನ್ನಟ್ಟಿಕೊಂಡು ಓಡೋಡಿ ಬರುತ್ತೆ. ಅದೇ ಸಮಯದಲ್ಲಿ ಕಳ್ಳನೊಬ್ಬ ಎದ್ನೋ-ಬಿದ್ನೋ ಅಂತ ಓಡ್ತಿರ್ತಾನೆ. ಅವನ ಹಿಂದೆಯೇ ಪೊಲೀಸ್ ಕಾನ್ಸ್ಟೆಬಲ್ ಕೂಡಾ ಫಾಲೋ ಮಾಡ್ಕೊಂಡು ಬರ್ತಾನೆ.

ಒಂದೇ ಸಮಯದಲ್ಲಿ ಈ ಮೂರು ಘಟನೆಗಳು ನಡೆದಿರೋದು ಕಾಕತಾಳೀಯ. ಇಂತಹ ಘಟನೆಗಳನ್ನ ಸಿನೆಮಾಗಳಲ್ಲಿ ನೋಡ್ತಿರ್ತೆವೆ. ಈ ಬಾರಿ ವಾಸ್ತವದಲ್ಲಿ ನಡೆದಿರೋದು ನೋಡಿ ನೆಟ್ಟಿಗರು ಶಾಕ್ ಆಗಿ ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.

ಈ ವೀಡಿಯೋವನ್ನ ಏನಿಲ್ಲ ಅಂದರೂ, ಸುಮಾರು 2ಲಕ್ಷ ಜನರು ನೋಡಿದ್ದಾರೆ. ಕೆಲವರು ಇದು ಸಿನೆಮಾದ ದೃಶ್ಯದಂತಿದೆ ಅಂತ ಕಾಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ನೋಡಿ ಲೇವಡಿ ಮಾಡಿದ್ದಾರೆ.

https://twitter.com/Yoda4ever/status/1610016203476549639?ref_src=twsrc%5Etfw%7Ctwcamp%5Etweetembed%7Ctwterm%5E1610016203476549639%7Ctwgr%5E8558e582b501e980183f86c12b81746fca932b0d%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-epic-video-of-wife-husband-dog-cat-and-thief-police-chase-caught-at-once-6755257.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read