ಹುಡುಗರಲ್ಲಿ ಯಾವ ಅರ್ಹತೆಯಿರಬೇಕೆಂದು ಬಯಸುತ್ತಾರೆ ಹುಡುಗಿಯರು ? ಇಲ್ಲಿದೆ ಇಂಟ್ರಸ್ಟಿಂಗ್‌ ವಿಡಿಯೋ

ಸಾಮಾಜಿಕ ಜಾಲತಾಣದ ಈ ಜಗತ್ತಿನಲ್ಲಿ ನಾವೆಲ್ಲಾ ಈ ಹಿಂದೆ ಏನೆಲ್ಲಾ ಭಾವಿಸಿದ್ದೇವೋ ಅವೆಲ್ಲಾ ಅಸಲಿಗೆ ಅದೆಷ್ಟು ಸತ್ಯ/ಸುಳ್ಳು ಎಂಬುದನ್ನು ಅರಿಯುವುದು ದೊಡ್ಡ ವಿಚಾರವಾಗಿ ಉಳಿದಿಲ್ಲ.

ಮಹಿಳೆಯರ ಬಗ್ಗೆ ಪುರುಷರಿಗಿದ್ದ ಭಾವನಾತ್ಮಕ ಅನಿಸಿಕೆಗಳನ್ನೆಲ್ಲಾ ಬಿಟ್ಟು, ಸಂಬಂಧಗಳಲ್ಲಿ ವಾಸ್ತವಿಕತೆಯಿಂದ ಇರಬೇಕಾದ ಅಗತ್ಯತೆಯನ್ನು ತೋರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ.

ಅಂಥದ್ದೇ ವಿಡಿಯೋವೊಂದರಲ್ಲಿ, “ಹುಡುಗಿಯ ಬಾಯ್‌ಫ್ರೆಂಡ್ ಆಗಲು ಹುಡುಗನಿಗೆ ಏನೆಲ್ಲಾ ಅರ್ಹತೆಗಳಿರಬೇಕು?’ ಎಂಬ ಪ್ರಶ್ನೆಯನ್ನು ಖುದ್ದು ಹುಡುಗಿಯರಿಗೆ ಕೇಳುತ್ತಿರುವ ವಿಡಿಯೋ ಇದು.

“ಆತ ಹುಡುಗನಾಗಿರಬೇಕು,” “ಆತ ಬಡವನಾಗಿರಬಾರದು,” “ಆತನಲ್ಲಿ ಹಣವಿರಬೇಕು,” “ಆತ ನೋಡಲು ಚೆನ್ನಾಗಿರಬೇಕು, ನಾವು ಎಲ್ಲಾದರೂ ಹೋದರೆ ಆತನನ್ನು ಬಚ್ಚಿಡುವಂತಿರಬಾರದು,” ಎಂಬೆಲ್ಲಾ ಉತ್ತರಗಳನ್ನು ಹುಡುಗಿಯರು ನಿರೂಪಕನಿಗೆ ಕೊಡುತ್ತಾ ಹೋಗಿದ್ದಾರೆ.

ಈ ವಿಡಿಯೋವನ್ನು ನೋಡುವಷ್ಟೇ ಮಜ ಕಾಮೆಂಟ್ ವಿಭಾಗದಲ್ಲಿ ಹಾಕಿರುವ ಫನ್ನಿ ಕಾಮೆಂಟ್‌ಗಳನ್ನು ನೋಡಿದಾಗ ಸಿಗುತ್ತದೆ. ”ಅರೇ ದೀದಿ ಅವನ ಬಳಿ ಅಂದ-ಚಂದ ಹಾಗೂ ದುಡ್ಡಿದ್ದರೆ ನೌಕರಿ ಯಾರು ನೀವು ಮಾಡುತ್ತೀರಾ?” ಎಂದು ನೆಟ್ಟಿಗನೊಬ್ಬ ಕೇಳಿದ್ದಾನೆ.

“ಇದಕ್ಕೇ ಹೇಳೋದು ಸಹೋದರ, ದುಡ್ಡು ಸಂಪಾದಿಸಿ, ಇವರೇ ಹಿಂದೆ ಬರುತ್ತಾರೆ,” ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಹಾಕಿದ್ದಾನೆ.

https://youtu.be/-BnsvTWrmGg

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read