ವಧುವಿಗೆ ಹಾರ ಹಾಕಲು ನಿಂತ ವರನಿಗೆ ಶಾಕ್ ಆದ ಘಟನೆ ಇದು. ವಧುವಿನ ಅತ್ಯಂತ ಭಯಾನಕ ರೂಪದ ವೀಡಿಯೊವು ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಜನರನ್ನು ಬೆಚ್ಚಿಬೀಳಿಸಿದೆ. ಈ ವೀಡಿಯೋದಲ್ಲಿ ವಧು, ವರನನ್ನು ನೋಡಿದ ಕೂಡಲೇ ತನ್ನೊಳಗೆ ದೆವ್ವ ಪ್ರವೇಶಿಸಿದೆ ಎಂಬಂತೆ ವರ್ತಿಸುವುದನ್ನು ಕಾಣಬಹುದು. ಎಲ್ಲರೂ ಅವಳನ್ನು ನೋಡಿ ಹೆದರುತ್ತಾರೆ.
ವರನು ಆಕೆಯನ್ನು ನೋಡಿದ ನಂತರ ಬೆದರಿ ಅಲಂಕಾರಿಕ ಕುರ್ಚಿಯ ಮೇಲೆ ಬೀಳುತ್ತಾನೆ. ವಧುವಿನ ಆ ಭಯಾನಕ ರೂಪವು ಎಲ್ಲರ ಹುಬ್ಬೇರಿಸುತ್ತದೆ. ಮದುವೆಯಲ್ಲಿದ್ದ ಜನ ಅವಳನ್ನು ತಡೆಯಲು ಪ್ರಯತ್ನಿಸಿದರೂ ಆಕೆಯನ್ನು ಶಾಂತಗೊಳಿಸಲು ವಿಫಲರಾಗುತ್ತಾರೆ.
ಈ ವೈರಲ್ ವಿಡಿಯೋ ಗಮನ ಸೆಳೆದಿದ್ದು, ಮದುವೆ ನಿಲ್ಲಿಸಲು ವಧು ಈ ರೀತಿ ನಟಿಸುತ್ತಿದ್ದಾಳೆಂದು ಕಮೆಂಟ್ ಮಾಡಿದರೆ, ಕೆಲವರು ಇದು scripted ಎಂದಿದ್ದಾರೆ. ಕೆಲವರಂತೂ ವಿಡಿಯೋಗೆ ನಗುವಿನ ಎಮೋಜಿ ಹಾಕಿ ತಮಾಷೆಯಾಗಿದೆ ಎಂದು ನಕ್ಕಿದ್ದಾರೆ.
https://twitter.com/RaviShanka_IND/status/1792417941725852060?ref_src=twsrc%5Etfw%7Ctwcamp%5Etweetembed%7Ctwterm%5E1792417941725852060%7Ctwgr%5Ee68d1b99b8f8d583a929d53ef0e5e22672f09f97%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideoweirdbridestartsbehavingasifpossessedaheadofvarmalagroomsreactionispricelesswatch-newsid-n610328918