ನನಗೆ ಮುತ್ತು ಕೊಟ್ಟರೆ ನಿನಗೆ ಕೆಲಸ; ಉದ್ಯೋಗಕಾಂಕ್ಷಿ ಯುವತಿ ಮುಂದೆ ಬೇಡಿಕೆಯಿಟ್ಟ ಪ್ರಾಂಶುಪಾಲನ ವಿಡಿಯೋ ವೈರಲ್….!

ಖಾಸಗಿ ಶಾಲೆಯ ಪ್ರಾಂಶುಪಾಲನೊಬ್ಬ ಉದ್ಯೋಗ ಕೋರಿ ಬಂದಿದ್ದ ಯುವತಿಯೊಬ್ಬರಿಗೆ ತನ್ನ ಶಾಲೆಯಲ್ಲಿ ಶಿಕ್ಷಕಿ ಹುದ್ದೆ ನೀಡಲು ಮುತ್ತು ನೀಡುವಂತೆ ಕೋರಿರುವ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಯುವತಿ ಉದ್ಯೋಗ ಕೋರಿ ಖಾಸಗಿ ಶಾಲೆಯ ಪ್ರಾಂಶುಪಾಲನ ಕಚೇರಿಗೆ ತೆರಳಿದ್ದಾಳೆ. ಈ ಸಂದರ್ಭದಲ್ಲಿ ಆತ ಶಿಕ್ಷಕಿ ಹುದ್ದೆ ನೀಡಲು ತನಗೆ ಮುತ್ತು ನೀಡುವಂತೆ ಕೇಳಿದ್ದಾನೆ. ಇದನ್ನು ಆ ಯುವತಿ ಸ್ಪಷ್ಟವಾಗಿ ನಿರಾಕರಿಸಿದ್ದು, ಇದೆಲ್ಲಾ ದೃಶ್ಯಾವಳಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಲ್ಲದೆ ಆ ಪ್ರಾಂಶುಪಾಲ ಲೈಂಗಿಕ ಸಂಬಂಧದ ಬೇಡಿಕೆಯನ್ನೂ ಇಟ್ಟಿದ್ದಾನೆ ಎನ್ನಲಾಗಿದ್ದು, ಈತನ ಈ ಎಲ್ಲ ವಿಚಾರವನ್ನು ಮೊದಲೇ ತಿಳಿದುಕೊಂಡಿದ್ದ ಯುವತಿ ಗುಪ್ತವಾಗಿ ಮೊಬೈಲ್ ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ವೀಕ್ಷಿಸಿದ ನೆಟ್ಟಿಗರು ಕಾಮುಕ ಪ್ರಾಂಶುಪಾಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

https://twitter.com/VikasJa40157938/status/1820843073422729509?ref_src=twsrc%5Etfw%7Ctwcamp%5Etweetembed%7Ctwterm%5E1820843073422729509%7Ctwgr%5E7b41e6d9d123b52d

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read