ಫ್ಯಾಷನ್ ಎನ್ನುವುದು ಇವತ್ತಿನ ದಿನಗಳಲ್ಲಿ ವಿಚಿತ್ರ ರೂಪ ಪಡೆಯುತ್ತಿದೆ. ಪ್ಯಾಂಟ್ ರಹಿತವಾಗಿ ಕ್ಯಾಟ್ವಾಕ್ ಮಾಡುವುದನ್ನು ನೋಡಿರುವಿರಿ. ಇನ್ನು ಕೆಲವು ಕಡೆಗಳಲ್ಲಿ ಲಲನೆಯರು ಹಾಕುವ ಡ್ರೆಸ್ಗಳ ಬಗ್ಗೆಯಂತೂ ಹೇಳುವುದೇ ಬೇಡ. ಇದು ಫ್ಯಾಷನ್ನೋ, ಸಂಪೂರ್ಣ ದೇಹ ಪ್ರದರ್ಶನದ ಕಾರ್ಯಕ್ರಮವೋ ಎಂದು ತಿಳಿಯದಷ್ಟು ರೀತಿಯಲ್ಲಿ ಫ್ಯಾಷನ್ ಷೋಗಳು ನಡೆಯುತ್ತವೆ.
ಹೆಣ್ಣುಮಕ್ಕಳಿಗಿಂತ ತಾವೇನು ಕಮ್ಮಿ ಎನ್ನುವಂಥ ಪುರುಷರ ಫ್ಯಾಷನ್ ಷೋ ಒಂದರ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದೆ. ಫ್ಯಾಷನ್ ಲೇಬಲ್ ಮೊವಾಲೋಲಾ ಕಂಪೆನಿ ಸದಾ ತನ್ನ ಚಮತ್ಕಾರಿ ಸಂಗ್ರಹವನ್ನು ಆಗಾಗ್ಗೆ ಪ್ರದರ್ಶಿಸುತ್ತಿದ್ದು, ಈ ವಾರದ ಆರಂಭದಲ್ಲಿ ಲಂಡನ್‌ನಲ್ಲಿ ಕೆಲವು ವಿಲಕ್ಷಣ ಡೆನಿಮ್‌ಗಳನ್ನು ಪ್ರದರ್ಶಿಸಿದೆ.
ಈ ವಿಡಿಯೋದಲ್ಲಿ ಜೀನ್ಸ್ ಪ್ಯಾಂಟ್ಗಳನ್ನು ಮೊಣಕಾಲಿಗಿಂತ ಕೆಳಗೆ ತೊಟ್ಟಿರುವ ಕೆಲವು ಯುವಕರು ತಮ್ಮ ಒಳ ಉಡುಪು ಪ್ರದರ್ಶಿಸುತ್ತಾ ರ್ಯಾಂಪ್ವಾಕ್ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಥರಹೇವಾರಿ ಕಮೆಂಟ್ಗಳು ಬರುತ್ತಿವೆ.
https://twitter.com/OsservaMy/status/1627287536220479488?ref_src=twsrc%5Etfw%7Ctwcamp%5Etweetembed%7Ctwterm%5E1627287536220479488%7Ctwgr%5E33ff99ad8a3062cc9e7ee72e543756fdde163d71%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-not-the-classic-low-waist-jeans-fashion-models-walk-the-ramp-flaunting-quirky-fitting-denims