ಕುಡಿದ ಅಮಲಿನಲ್ಲಿ ಯುವತಿಗೆ ಅಸಭ್ಯ ಸ್ಪರ್ಶ; ಸಂಗಾತಿಯ ಪಂಚ್‌ ಗೆ ಪ್ರಜ್ಞೆತಪ್ಪಿ ಬಿದ್ದ ಕಿಡಿಗೇಡಿ | Watch Video

ಕ್ಲಬ್‌ನಲ್ಲಿ ನಡೆದ ಘಟನೆಯೊಂದರ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯದಲ್ಲಿ ಯುವತಿಯೊಬ್ಬರಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಆಕೆಯ ಸಂಗಾತಿ ತಕ್ಕ ಶಿಕ್ಷೆ ನೀಡಿದ್ದಾರೆ.

ಕ್ಲಬ್‌ನಲ್ಲಿ ಯುವತಿ ತನ್ನ ಸಂಗಾತಿಯೊಂದಿಗೆ ಬಿಲಿಯರ್ಡ್ಸ್ ಆಡುತ್ತಿದ್ದರು. ಈ ವೇಳೆ ಕಿತ್ತಳೆ ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ. ಯುವತಿ ಆತನನ್ನು ದೂರ ತಳ್ಳಲು ಪ್ರಯತ್ನಿಸಿದರೂ, ಆತ ತನ್ನ ಅಸಭ್ಯ ವರ್ತನೆಯನ್ನು ಮುಂದುವರೆಸಿದ್ದಾನೆ.

ಇದನ್ನು ಗಮನಿಸಿದ ಯುವತಿಯ ಸಂಗಾತಿ ಆ ವ್ಯಕ್ತಿಯ ಮುಖಕ್ಕೆ ಭರ್ಜರಿ ಪಂಚ್ ನೀಡಿದ್ದಾನೆ. ಪಂಚ್‌ನ ರಭಸಕ್ಕೆ ಆತ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಯುವತಿಯ ಸಂಗಾತಿಯನ್ನು ಬೆಂಬಲಿಸಿದ್ದಾರೆ. ಕಿರುಕುಳ ನೀಡಿದ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read