ಮೂರು ಉದ್ಯೋಗಕ್ಕಾಗಿ ನೂರಾರು ಮಂದಿ ; ವಿಡಿಯೋ ವೈರಲ್‌ | Watch

ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಎಷ್ಟರ ಮಟ್ಟಿಗೆ ಇದೆ ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಉದ್ಯೋಗಕ್ಕಾಗಿ ನೂರಾರು ಜನ ಮುಗಿಬಿದ್ದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉದ್ಯೋಗಕ್ಕಾಗಿ ಜನ ಮುಗಿಬಿದ್ದಿರುವ ದೃಶ್ಯವನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ. ಇಲ್ಲಿ ಉದ್ಯೋಗ ಸಮಸ್ಯೆ ತೀವ್ರವಾಗಿದೆ. ಅನೇಕ ಜನರು ಉದ್ಯೋಗ ಹುಡುಕಲು ಪರದಾಡುತ್ತಿದ್ದಾರೆ. ವಾಕ್-ಇನ್ ಸಂದರ್ಶನಗಳಲ್ಲಿ ಕಂಪನಿಗಳ ಹೊರಗೆ ಉದ್ದನೆಯ ಸಾಲು ಮತ್ತು ನೂಕುನುಗ್ಗಲಿನಂತಹ ದೃಶ್ಯಗಳು ಸಾಮಾನ್ಯವಾಗಿವೆ. ಇಂತಹ ವಿಡಿಯೋಗಳು ವೈರಲ್ ಆಗುತ್ತಿವೆ.

ಇತ್ತೀಚೆಗೆ ರೆಡ್ಡಿಟ್ ನಲ್ಲಿ ಒಂದು ವೈರಲ್ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ ನೂರಾರು ಜನರು ಕೆಲಸಕ್ಕಾಗಿ ಕಾಯುತ್ತಿದ್ದಾರೆ.

ವಾಕ್-ಇನ್ ಸಂದರ್ಶನವಾದ್ದರಿಂದ 10 ರಿಂದ 50 ಜನರು ಇರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ವಾಸ್ತವ ಬೇರೆಯೇ ಇದೆ. ಕಚೇರಿ ಕಟ್ಟಡದ ಹೊರಗೆ ಅಭ್ಯರ್ಥಿಗಳು ಉದ್ದನೆಯ ಸಾಲಿನಲ್ಲಿ ಕಾಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಉದ್ಯೋಗಾಕಾಂಕ್ಷಿಗಳ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲದಿದ್ದರೂ, ನೂರಾರು ಜನರು ಸಾಲಿನಲ್ಲಿರುವುದು ಕಂಡುಬಂದಿದೆ. ಈ ವಿಡಿಯೋಗೆ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕಂಪನಿ ಕೇವಲ 2-3 ಹುದ್ದೆಗಳಿಗೆ ಈ ರೀತಿ ಸಂದರ್ಶನ ನಡೆಸುತ್ತಿದೆ. ಕಂಪನಿಗೆ ಈಗಾಗಲೇ ಅಭ್ಯರ್ಥಿಗಳಿದ್ದಾರೆ. ಇದೊಂದು ನಾಟಕ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಈ ಸಾಲಿನಲ್ಲಿ ಮಹಿಳೆಯರು ಏಕೆ ಇಲ್ಲ ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೇ ರೀತಿಯ ಉದ್ಯೋಗ ಪೋಸ್ಟ್‌ಗಳನ್ನು ನಾನು ನೋಡಿದ್ದೇನೆ, ಅಲ್ಲಿಯೂ ಹೆಚ್ಚಾಗಿ ಪುರುಷರೇ ಇದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದು ತುಂಬಾ ದುಃಖಕರ ಎಂದು ಮೂರನೇ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

walkins jobs reality
byu/Narayansahu379 inBtechtards

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read