ಹುಲಿ ಎಂದಿಗೂ ತನ್ನ ಬೇಟೆಯನ್ನ ಬಿಟ್ಟುಕೊಡುವುದಿಲ್ಲ. ತನ್ನ ತೀಕ್ಷ್ಣ ನೋಟ ಮತ್ತು ಗುರಿ ಮೇಲಿನ ಗಮನದಿಂದ ಅದರ ಬೇಟೆ ಮೀಸ್ ಆಗುವುದಿಲ್ಲ. ಆದರೆ ಕೆಲವೊಮ್ಮೆ ಪ್ರಕೃತಿಯಲ್ಲಿ ನಿರೀಕ್ಷೆಗೂ ಮೀರಿದ ಘಟನೆಗಳು ಜರುಗುತ್ತವೆ. ಬಾತುಕೋಳಿಯ ಕಣ್ಣಾಮುಚ್ಚಾಲೆ ಆಟದ ಮುಂದೆ ಪೆಚ್ಚಾದ ಹುಲಿಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಕೊಳದಲ್ಲಿ ಪುಟ್ಟ ಬಾತುಕೋಳಿಯೊಂದು ಇರುತ್ತದೆ. ಇದನ್ನು ನೋಡಿದ ಹುಲಿ ಬೇಟೆಗೆಂದೇ ಕೊಳಕ್ಕೆ ಇಳಿಯುತ್ತದೆ. ಆದರೆ ಇದನ್ನು ಗಮನಿಸಿದ ಬಾತುಕೋಳಿ ಹುಲಿ ಕಣ್ಣಿನಿಂದ ತಪ್ಪಿಸಿಕೊಳ್ಳಲು ನೀರಿನೊಳಗೆ ಮುಳುಗುತ್ತದೆ.
ಹುಲಿ ತಪ್ಪಿಸಿಕೊಂಡ ಬಾತುಕೋಳಿಗಾಗಿ ಹುಡುಕಾಡುತ್ತಿದ್ದರೆ ಅದು ಹುಲಿಯ ಹಿಂಭಾಗದಲ್ಲಿ ನೀರಿನ ಮೇಲೆ ಕಾಣಿಸಿಕೊಳ್ಳುತ್ತದೆ. ಇದೇ ರೀತಿ ಹುಲಿ ಹತ್ತಿರ ಬಂದಂತೆಲ್ಲಾ ಬಾತುಕೋಳಿ ಜಾಣತನದಿಂದ ನೀರಲ್ಲಿ ಮುಳುಗಿ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಈ ವಿಡಿಯೋವನ್ನ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು 1 ಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿದ್ದು ಸ್ಮಾರ್ಟ್ ಬಾತುಕೋಳಿ ಎಂದು ನೆಟ್ಟಿಗರು ಹೊಗಳಿದ್ದಾರೆ.
https://twitter.com/buitengebieden/status/1677757950612340740?ref_src=twsrc%5Etfw%7Ctwcamp%5Etweetembed%7Ctwterm%5E1677757950612340740%7Ctwgr%5E9b2acd5bafb54fef7bdb2614bc5128cbc926b74e%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fviralvideocleverduckleavestigerbewilderedinhilariousencounterwatch-newsid-n516775038