ವಯಸ್ಸಾದ ಅಜ್ಜಿ ಆರ್ಕೆಸ್ಟ್ರಾದಲ್ಲಿ ಅಶ್ಲೀಲವಾಗಿ ನೃತ್ಯ ಮಾಡ್ತಿದ್ದ ಯುವತಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿ ಯುವತಿಯರು ಅಶ್ಲೀಲವಾಗಿ ನೃತ್ಯ ಮಾಡುತ್ತಿರುತ್ತಾರೆ. ಇದನ್ನು ಕಂಡ ಅಜ್ಜಿ ಕಡ್ಡಿ ಹಿಡಿದುಕೊಂಡಿ ಬಂದು ನೃತ್ಯವನ್ನು ವಿರೋಧಿಸುತ್ತಾ ನೃತ್ಯಗಾರ್ತಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಅದರಲ್ಲಿ ಯುವತಿಯೊಬ್ಬಳು ಇದಕ್ಕೆ ತಲೆಕೆಡಿಸಿಕೊಳ್ಳದೇ ಅಜ್ಜಿಯನ್ನು ಅಣಕಿಸುತ್ತಾ ತಮಾಷೆ ಮಾಡುತ್ತಾ ಅಶ್ಲೀಲವಾಗಿ ನೃತ್ಯ ಮಾಡುತ್ತಲೇ ಇರುತ್ತಾಳೆ. ಇದನ್ನು ನೋಡಿ ಅಲ್ಲಿ ನೆರೆದಿದ್ದವರೆಲ್ಲಾ ನಗುತ್ತಾರೆ. ಓರ್ವ ವ್ಯಕ್ತಿ ಅಜ್ಜಿಯನ್ನು ಸಮಾಧಾನ ಮಾಡುತ್ತಾ ಆಕೆಯನ್ನು ಅಲ್ಲಿಂದ ಕಳಿಸಲು ಪ್ರಯತ್ನಿಸುತ್ತಾನೆ. ಇದನ್ನೆಲ್ಲವನ್ನೂ ನೋಡುತ್ತಾ ಜನ ತಮಾಷೆ ಎಂಬಂತೆ ನಗುತಿರುತ್ತಾರೆ.
ಎರಡು ತಲೆಮಾರುಗಳ ನಡುವಿನ ಆಸಕ್ತಿ, ಪ್ರದರ್ಶನದ ವ್ಯತ್ಯಾಸವನ್ನು ವಿಡಿಯೋ ಎತ್ತಿ ತೋರಿಸಿದೆ. ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು, ಭಿನ್ನ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Desi-Orchestra Kalesh b/w Dadi amd a Stage dancer
pic.twitter.com/KBr40U1iDs— Ghar Ke Kalesh (@gharkekalesh) June 5, 2024