ಮಾಲೆಗಾಂವ್ : 12 ವರ್ಷದ ಬಾಲಕನೊಬ್ಬ ಮೊಬೈಲ್ ಫೋನ್ ನಲ್ಲಿ ಆಟವಾಡುತ್ತಿದ್ದಾಗ ಚಿರತೆಯೊಂದು ಮನೆಗೆ ನುಗ್ಗಿದ್ದು, ಬಾಲಕ ಪವಾಡ ಸದೃಶವೆಂಬಂತೆ ಪಾರಾದ ವಿಡಿಯೋ ವೈರಲ್ ಆಗಿದೆ.
ಮಹಾರಾಷ್ಟ್ರದ ಮಾಲೆಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಮನೆಯೊಳಗೆ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ 24 ಸೆಕೆಂಡುಗಳ ವೀಡಿಯೊದಲ್ಲಿ, ಬಾಲಕ ಮೊಬೈಲ್ ಫೋನ್ ನಲ್ಲಿ ಆಟ ಆಡುತ್ತಿದ್ದಾಗ ಚಿರತೆ ತುಂಬಾ ಶಾಂತವಾಗಿ ಮನೆಯೊಳಗೆ ಪ್ರವೇಶಿಸಿದೆ, ಇದನ್ನು ನೋಡಿ ಶಾಕ್ ಆದ ಬಾಲಕ ಕೂಗಿಕೊಳ್ಳದೇ ಉಪಾಯದಿಂದ ಮನೆಯ ಬಾಗಿಲಿನಿಂದ ಹೊರಗೆ ಹೋಗಿ ಚಿಲಕ ಹಾಕಿದ್ದಾನೆ.
ಚಿರತೆ ತನ್ನ ಮನೆಗೆ ಪ್ರವೇಶಿಸುವುದನ್ನು ನೋಡಿದ ನಂತರ ಬಾಲಕ ಗಾಬರಿಗೊಳ್ಳದೆ ತನ್ನ ಮನೆಯ ಮತ್ತೊಂದು ಕೋಣೆಗೆ ಪ್ರವೇಶಿಸುವವರೆಗೂ ಕಾಯುತ್ತಿದ್ದನು. ಚಿರತೆ ಮತ್ತೊಂದು ಕೋಣೆಗೆ ಹೋದ ನಂತರ ಬಾಲಕ ಸದ್ದಿಲ್ಲದೆ ಮನೆಯಿಂದ ಹೊರಬಂದು ಬಾಗಿಲು ಲಾಕ್ ಮಾಡಿದ್ದಾನೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಂತರ ಬಾಲಕ ಎಲ್ಲರಿಗೂ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದಿದ್ದಾರೆ.
Viral Video Shows Minor Boy Playing Video Game As Leopard Enters His House in Malegaon | Watchhttps://t.co/QuUC4XCPM1 pic.twitter.com/VyBNMLBoTO
— Republic (@republic) March 6, 2024

