Viral Video | ನಿತಿನ್‌ ಹೆಗ್ಡೆ ಅವರ ‘ಬಕ್ಕತಲೆ – ಚೊಕ್ಕ ತಲೆ’ ಕವನ ಫುಲ್ ವೈರಲ್

ಅನ್ಯಾಯಕಾರಿ ಬ್ರಹ್ಮ ಹಾಡು ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿ ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು. ಜನರು ಇನ್ನೂ ಆ ಹಾಡಿನ ಗುಂಗಿನಲ್ಲಿರುವಾಗಲೇ ಇದೀಗ ವಿಕಟ ಕವಿ ತೀರ್ಥಹಳ್ಳಿಯ ನಿತಿನ್ ಹೆಗ್ಡೆ ಅವರ ‘ಬಕ್ಕತಲೆ – ಚೊಕ್ಕ ತಲೆ’ ಕವನ ಭಾರಿ ವೈರಲ್ ಆಗುತ್ತಿದೆ.

ಬೋಳು ತಲೆಯವರ ಕಷ್ಟ ಸುಖಗಳ ಕಥೆಯಾಧಾರಿತ ಚಿತ್ರ ರಾಜ್ ಬಿ. ಶೆಟ್ಟಿ ಅಭಿನಯದ ‘ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲಿ ಕೂದಲಿಲ್ಲದವರ ಬೋಳು ತಲೆಯವರ ಗೋಳನ್ನು ವಿವರಿಸಲಾಗಿತ್ತು. ಇದೀಗ ವೈರಲ್ ಆಗಿರುವ ನಿತಿನ್ ಹೆಗ್ಡೆ ಅವರ ‘ಬಕ್ಕತಲೆ – ಚೊಕ್ಕ ತಲೆ’ ಕವನದಲ್ಲಿ ತಲೆಯಲ್ಲಿ ಕೂದಲಿಲ್ಲದಿರುವುದನ್ನೇ ಸ್ಫೋರ್ಟಿವ್ ಆಗಿ ತೆಗೆದುಕೊಂಡು ಪದ್ಯ ರಚನೆ ಮಾಡಿ ಎಲ್ಲರನ್ನು ನಕ್ಕು ನಲಿಸಿದ್ದಾರೆ.

ʼಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ……ʼ ಎಂಬ ಜನಪದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಪುಟ್ಟ ಮಕ್ಕಳಿಂದ ಹಿಡಿದು ಯುವಕರವರೆಗೂ ಆ ಹಾಡಿಗೆ ಹೆಜ್ಜೆಹಾಕಿ ರಂಜಿಸಿದ್ದರು. ಇದರ ನಡುವೆಯೇ ನಿತಿನ್ ಹೆಗಡೆ ಅವರ ಬೋಳು ತಲೆ ಹಾಡು ಸಿಕ್ಕಪಟ್ಟೆ ವೈರಲ್ ಆಗುತ್ತಿದ್ದು, ಕವನದಲ್ಲಿರುವ ಪದ ಪುಂಜಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read