Viral Video: ಕಮಿಲಾ ವಲೀವಾ ಸ್ಕೇಟಿಂಗ್​ ಪ್ರದರ್ಶನಕ್ಕೆ ನಿಬ್ಬೆರಗಾದ ಜನತೆ

ನೀವು ಇನ್‌ಸ್ಟಾಗ್ರಾಮ್‌ ಪ್ರೇಮಿಗಳಾಗಿದ್ದರೆ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಜೆನ್ನಾ ಒರ್ಟೆಗಾ ಪ್ರದರ್ಶಿಸಿದ ಚಮತ್ಕಾರಿ ನೃತ್ಯವನ್ನು ಮರುಸೃಷ್ಟಿಸುವ ಜನರ ವಿಡಿಯೋಗಳಿಂದ ಪ್ರಭಾವಿತರಾಗಿರುತ್ತೀರಿ. ಒಂದು ವೇಳೆ ಹೀಗೆ ಮಾಡದೇ ಹೋದರೆ ನೀವು ಏನನ್ನೋ ಕಳೆದುಕೊಳ್ಳುತ್ತಿದ್ದೀರಿ ಎನ್ನುತ್ತಿದ್ದಾರೆ ನೆಟ್ಟಿಗರು.

ತುಂಬಾ ನಯನಮನೋಹರವಾಗಿರುವ ನೃತ್ಯವನ್ನು ಸಂಯೋಜನೆ ಮಾಡಲು ಒರ್ಟೆಗಾ ಬಹಳಷ್ಟು ಗೋಥ್ ನೃತ್ಯ ಸಂಯೋಜನೆಯಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ. ಇದೀಗ, ರಷ್ಯಾದ ಫಿಗರ್ ಸ್ಕೇಟರ್ ನೃತ್ಯವನ್ನು ಮರುಸೃಷ್ಟಿಸುವ ಮೂಲಕ ಇಂಟರ್ನೆಟ್ ಅನ್ನು ಬೆರಗುಗೊಳಿಸಿದ್ದಾರೆ.

ಕಮಿಲಾ ವಲೀವಾ ಅವರು ತಮ್ಮ ಆನ್-ಪಾಯಿಂಟ್ ಡ್ಯಾನ್ಸ್ ಸ್ಟೆಪ್‌ಗಳೊಂದಿಗೆ ಅದ್ಭುತವಾಗಿ ನಟಿಸಿದ್ದಾರೆ. ವಲೀವಾ ವೇದಿಕೆಯ ಉದ್ದಕ್ಕೂ ಸ್ಕೇಟಿಂಗ್ ಮಾಡುವಾಗ ಚಮತ್ಕಾರಿ ನೃತ್ಯ ಸಂಯೋಜನೆ ಮಾಡಿರುವುದನ್ನು ನೋಡಬಹುದು. ನಂಬಲಾಗದ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಈ ಅದ್ಭುತ ನೃತ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ. ಯೂಟ್ಯೂಬ್​ಗೆ ಕಮಿಲಾ ವಲೀವಾ ಅವರ ನೃತ್ಯ ಅಪ್​ಲೋಡ್​ ಮಾಡಿದ ತಕ್ಷಣ 1.9 ಮಿಲಿಯನ್ ವೀಕ್ಷಣೆಗಳು ಮತ್ತು ಟನ್​ಗಟ್ಟಲೆ ಪ್ರತಿಕ್ರಿಯೆಗಳು ಬಂದಿವೆ. ಮಂಜುಗಡ್ಡೆಯ ಮೇಲೆ ಸ್ಕೇಟಿಂಗ್ ಮಾಡುವಾಗ ನೃತ್ಯ ಸಂಯೋಜನೆಯನ್ನು ಮಾಡುವುದು ಎಷ್ಟು ಕಠಿಣ. ಆದರೂ ಅದನ್ನು ಸಲೀಸಾಗಿ ಮಾಡಿ ಈಕೆ ಎಲ್ಲರ ಹುಬ್ಬೇರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read