Viral Video | ಕಛೇರಿಗೆ ಹೋಗಲು ಹಿಂದೇಟು ಹಾಕುತ್ತಿದ್ದ ತಾಯಿ; ಹೀಗೆ ಸಮಾಧಾನಿಸಿದ್ದಾನೆ ಪುಟ್ಟ ಪೋರ

article-image

ಶನಿವಾರ, ಭಾನುವಾರ ಎರಡು ದಿನ ಕೆಲಸಕ್ಕೆ ರಜಾ ಇದ್ದು, ಸೋಮವಾರ ಕೆಲಸಕ್ಕೆ ತೆರಳುವುದೆಂದರೆ ಎಲ್ಲರಿಗೂ ಮಕ್ಕಳು ಶಾಲೆಗೆ ಮೊದಲು ಹೊರಡುವ ದಿನ ಹೇಗಿರುತ್ತೋ, ಹಾಗೆಯೇ ಅನಿಸುತ್ತದೆ. ಸಾಮಾನ್ಯವಾಗಿ ಸೋಮವಾರ ಬಂತೆಂದರೆ ಸಾಕು ಪುಟ್ಟ ಮಕ್ಕಳು ತಾನು ಶಾಲೆಗೆ ಹೋಗುವುದಿಲ್ಲ ಎಂದು ರಂಪಾಟ ಮಾಡುತ್ತಾರೆ. ಆದರೆ, ಇಲ್ಲಿ ಮಾತ್ರ ಉಲ್ಟಾ ! ಅದೇನೆಂಬುದನ್ನು ಇಲ್ಲಿ ಓದಿ.

ತನ್ನ ತಾಯಿಯನ್ನು ಕಛೇರಿಗೆ ಹೋಗುವಂತೆ ಪ್ರೇರೇಪಿಸುವ ಪುಟ್ಟ ಬಾಲಕನ ಮಾತು ಕೇಳಿದ್ರೆ ರೋಮಾಂಚನಾಗುತ್ತದೆ. ಬಾಲಕ ಯುವಾಂಶ್ ಭಾರದ್ವಾಜ್ ಅವರಿಗೆ ಮೀಸಲಾಗಿರುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಈ ವಿಡಿಯೋವನ್ನು 7 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಪ್ರತಿದಿನ ಆಫೀಸ್‌ಗೆ ಹೋಗುತ್ತೇನೆ ಎಂದು ಕೊರಗುತ್ತಿದ್ದ ತನ್ನ ತಾಯಿಯನ್ನು ಆ ಪುಟ್ಟ ಬಾಲಕ ಸಮಾಧಾನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ತಾನು ಕಚೇರಿಗೆ ಹೋಗುವುದಿಲ್ಲ ಎಂದು ಬಾಲಕನ ತೊಡೆ ಮೇಲೆ ಮಲಗಿ ತಾಯಿ ಅಳುತ್ತಾಳೆ. ಸುಮ್ಮನಿರು, ನೀನು ಕಚೇರಿಗೆ ಹೋಗಬೇಕು ಎಂದು ಬಾಲಕ ಹೇಳುತ್ತಾನೆ. ಪುಟ್ಟ ಬಾಲಕನ ಈ ಮುದ್ದಾದ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

https://youtu.be/sh7BJHTLG3o

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read