ನವದೆಹಲಿ: ದೆಹಲಿಯ ಕೆಂಪು ಕೋಟೆ ಸಮೀಪ ಮೆಟ್ರೋ ಸ್ಟೇಷನ್ ಗೇಟ್ 1ರ ಬಳಿ ಕಾರ್ ನಲ್ಲಿ ಭಾರಿ ಪ್ರಬಲ ಸ್ಪೋಟ ಸಂಭವಿಸಿದೆ. ಇದು ಭಾರೀ ಶಬ್ದದೊಂದಿಗೆ ಬಾಂಬ್ ಸ್ಪೋಟದಂತಿತ್ತು ಎಂದು ಸ್ಥಳೀಯರು, ಪ್ರತ್ಯಕ್ಷದರ್ಶಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 7 ಅಗ್ನಿಶಾಮಕ ದಳ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹಸರಸಾಹಸ ನಡೆಸಿದ್ದಾರೆ. ಸ್ಪೋಟಗೊಂಡ ಕಾರ್ ಹೊತ್ತಿ ಉರಿದಿದ್ದು, ಕಾರ್ ಪಕ್ಕದಲ್ಲಿದ್ದ 8 ಕಾರುಗಳು ಸುಟ್ಟು ಕರಕಲಾಗಿವೆ.
ಸ್ಪೋಟದ ತೀವ್ರತೆ ಭಾರಿ ಪ್ರಬಲವಾಗಿದ್ದು ಕಾರ್ ನಲ್ಲಿ ಓರ್ವ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಅನೇಕರು ಗಾಯಗೊಂಡಿರುವ ಸಾಧ್ಯತೆಯಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
#WATCH | Delhi: "I saw the flames from my house and then came down to see what had happened. There was a loud explosion. I live nearby," said local resident Rajdhar Pandey pic.twitter.com/mPVLWdxLPP
— ANI (@ANI) November 10, 2025
#WATCH | Delhi: Multiple casualties have been brought to the LNJP hospital due to the blast near Gate No 1 of Red Fort Metro Station. Several people have been injured in the incident, sources tell ANI
— ANI (@ANI) November 10, 2025
(Visuals from the spot) pic.twitter.com/Utih8Qmq6U
