Viral Throwback: ದೊಡ್ಡ ಬ್ಯಾನರ್‌ ಚಿತ್ರಗಳಿಂದ ಕೈಬಿಟ್ಟ ಕಾರಣಕ್ಕೆ ಮನನೊಂದಿದ್ದ ಐಶ್ವರ್ಯಾ

ಯಶ್ ಚೋಪ್ರಾರ ರೊಮ್ಯಾಂಟಿಕ್ ಮ್ಯೂಸಿಕಲ್ ಹಿಟ್ ವೀರ್‌-ಜ಼ಾರಾ ಚಿತ್ರದ ನಾಯಕಿಯಾಗಿ ಮೊದಲಿಗೆ ಐಶ್ವರ್ಯಾ ರೈರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಬಹಿರಂಗವಾಗದ ಕಾರಣಗಳಿಂದ ಐಶ್ವರ್ಯಾರನ್ನು ಚಿತ್ರತಂಡದಿಂದ ಕೈಬಿಡಲಾಗಿತ್ತು. ಸೆಲೆಬ್ರಿಟಿ ಚಾಟ್‌ ಶೋನ ಥ್ರೋಬ್ಯಾಕ್ ವಿಡಿಯೋವೊಂದು ವೈರಲ್ ಆಗಿದ್ದು, ಈ ಸುದ್ದಿ ಮತ್ತೆ ಚಾಲ್ತಿಯಲ್ಲಿದೆ.

ವೀರ್‌-ಜ಼ಾರಾ ಸೇರಿದಂತೆ ಐದು ದೊಡ್ಡ ಬ್ಯಾನರ್‌ ಚಿತ್ರಗಳಿಂದ ತಮ್ಮನ್ನು ಹೊರಹಾಕಿದ್ದರಿಂದಾಗಿ ಐಶ್ವರ್ಯಾ ಪಾಶ್ಚಾತ್ಯ ದೇಶಗಳತ್ತ ಮುಖ ಮಾಡಿದ್ದರು.

“ಅದ್ಯಾಕೆ ಹೀಗಾಯಿತು ಎಂಬುದಕ್ಕೆ ನನಗೆ ಉತ್ತರ ಸಿಗಲೇ ಇಲ್ಲ. ಒಂದೆರಡು ಚಿತ್ರಗಳಲ್ಲಿ ನಾನು ನಟಿಸಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಅದು ಆಗಲಿಲ್ಲ, ಇದಕ್ಕೆ ಕಾರಣವೂ ಗೊತ್ತಿಲ್ಲ. ನನಗೆ ಈ ಕುರಿತು ಯಾವ ವಿವರಣೆಯನ್ನೂ ಯಾರೂ ಕೊಟ್ಟಿಲ್ಲ,” ಎಂದು ಐಶ್ವರ್ಯಾ ಹೇಳುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ಚಿತ್ರಗಳಿಂದ ಹೊರಗುಳಿಯುವ ನಿರ್ಧಾರ ತಮ್ಮದಾಗಿರಲಿಲ್ಲ ಎನ್ನುವ ಐಶ್ವರ್ಯಾ, “ಬಾಕ್ಸ್ ಆಫೀಸ್ ಯಶಸ್ಸು ಹಾಗೂ ಸುಭದ್ರ ಸ್ಥಾನಮಾನಗಳಿದ್ದರೂ ಸಹ ಉದ್ಯಮದಲ್ಲಿ ನನಗೂ ಹೀಗೆ ಆಗಬಹುದು ಎಂಬುದು ಇಂಥ ಅನುಭವಗಳಿಂದ ಖಾತ್ರಿಯಾಯಿತು,” ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read