ಕೊಲಂಬೊ: ಸರ್ಕಾರದ ಹಣ ದುರುಪಯೋಗ ಆರೋಪದಲ್ಲಿ ಶ್ರೀಲಂಕಾ ಮಾಜಿ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಘೆ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
2023ರಲ್ಲಿ ವಿಕ್ರಮ್ ಸಿಂಘೆ ಇಂಗ್ಲೆಂಡ್ ಗೆ ಪ್ರಯಾಣಿಸಲು ಸಾರ್ವಜನಿಕ ನಿಧಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಮೀಸಲಿಟ್ಟ ಸರ್ಕಾರದ ಹಣ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳಿ ವಿಕ್ರಮ್ ಸಿಂಘೆ ಅವರನ್ನು ಬಂಧಿಸಿದ್ದಾರೆ. ವಿಕ್ರಮ್ ಸಿಂಘೆ 2022ರ ಜುಲೈ ನಿಂದ 2024ರ ಸೆಪ್ಟೆಂಬರ್ ವರೆಗೆ ಶ್ರೀಲಂಕಾ ಅಧ್ಯಕ್ಷರಾಗಿದ್ದರು.