HomeKarnatakaಸಿನಿಮಾ ಶೈಲಿಯಲ್ಲಿ ದುಷ್ಕರ್ಮಿಗಳಿಂದ ಅಟ್ಯಾಕ್: ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

ಸಿನಿಮಾ ಶೈಲಿಯಲ್ಲಿ ದುಷ್ಕರ್ಮಿಗಳಿಂದ ಅಟ್ಯಾಕ್: ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

ವಿಜಯಪುರ: ಥಾರ್ ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ತೆರಳುತ್ತಿದ್ದಾಗ ಸಿನಿಮಾ ಶೈಲಿಯಲ್ಲಿ ದಾಳಿ ನಡೆಸಿದ ದುಷ್ಕರ್ಮಿಗಳು ಉದ್ಯಮಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ಹೊರವಲಯದ ಅಲಿಯಾಬಾದ್ ಬಳಿ ನಡೆದಿದೆ.

ರಾಜು ಕಡೆ ಕೊಲೆಯಾದ ದುರ್ದೈವಿ. ರಿಯಲ್ ಎಷ್ಟೇ ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದ ರಾಜು ಕಡೆ ವಿಜಯಪುರದತ್ತ ಬರುತ್ತಿದ್ದಾಗ ಹಂತಕರು ಥಾರ್ ಜೀಪ್ ಗೆ ಟಿಪ್ಪರ್ ಲಾರಿ ಗುದ್ದಿದ್ದಾರೆ. ಬಳಿಕ ರಾಜು ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಸದಹ್ಯವದಂತೆ ಜೀಪಿನ ಡೋರ್ ಓಪನ್ ಆಗದಂತೆ ಮಾಡಲು ಕಲ್ಲಿನಿಂದ ಜಜ್ಜಿ ಲಾಕ್ ಮಾಡಿದ್ದಾರೆ. ಬಳಿಕ ತಲೆಯ ಮೇಲೆ ಕಲ್ಲಿನಿಂದ ಜಜ್ಜಿ ಹತ್ಯೆಗೈದು ಎಸ್ಕೇಪ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಳೇ ದ್ವೇಷವೇ ಕೊಲೆಗೆ ಕಾರಣ ಎನ್ನಲಗಿದೆ. ಹಂತಕರು ಹಲವು ದಿನಗಳಿಂದ ರಾಜು ಕೊಲೆಗೆ ಸಂಚು ರೂಪಿಸಿದ್ದರು. ಏಕಾಂಗಿಯಾಗಿ ಓಡಾಡುವುದನ್ನೇ ಕಾದು ವ್ಯವಸ್ಥಿತವಾಗಿ ಹತ್ಯೆ ,ಮಾಡಿ ಪರಾರಿಯಾಗಿದ್ದಾರೆ.

ರಾಜು ಪತ್ನಿ ಇಟಾಬಾಯಿ ವಿಜಯಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಪತ್ಯನ್ನು ಕೊಲೆಗೈದಿರುವ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷ್ಜೆ ನೀಡುವಂತೆ ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular