HomeLatest NewsBREAKING: ರಸ್ತೆಯಲ್ಲಿದ್ದ ನಾಯಿ ತಪ್ಪಿಸಲು ಹೋಗಿ ಭೀಕರ ಅಪಘಾತ: ಶಿಕ್ಷಕ ಸ್ಥಳದಲ್ಲೇ ದುರ್ಮರಣ!

BREAKING: ರಸ್ತೆಯಲ್ಲಿದ್ದ ನಾಯಿ ತಪ್ಪಿಸಲು ಹೋಗಿ ಭೀಕರ ಅಪಘಾತ: ಶಿಕ್ಷಕ ಸ್ಥಳದಲ್ಲೇ ದುರ್ಮರಣ!

ವಿಜಯಪುರ: ಭೀಕರ ರಸ್ತೆ ಅಪಘಾತದಲ್ಲಿ ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಅಂಬಳನೂರ ಕ್ರಾಸ್ ಬಳಿ ನಡೆದಿದೆ.

ವಾಸುದೇವ ಹಂಚಾಟೆ (46) ಮೃತ ಶಿಕ್ಷಕ. ಎಂದಿನಂತೆ ಬೆಳಿಗ್ಗೆ ಬೈಕ್ ನಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದಿದೆ. ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ವಾಸುದೇವ್ ಅವರಿಗೆ ತಲೆಗೆ ಗಂಭೀರಾವಾದ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಸುದೇವ್ ಕಣಕಾಲ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಶಿಕ್ಷಕನ ಸಾವಿನ ಸುದ್ದಿಕೇಳಿ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular