ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ಭೀಮಾ ನದಿ ಪ್ರವಾಹೋಪಾದಿಯಲ್ಲಿ ಹರಿಯುತ್ತಿದ್ದು, ಸೇತುಗಳು, ಗ್ರಾಮಗಳು, ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಸಂಕಷ್ಟಕ್ಕೀಡಾದ ಜನರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುತ್ತಿದೆ.
ಈ ನಡುವೆ ಪ್ರವಾಹ ಪರಿಸ್ಥಿತಿ, ಮಳೆಹಾನಿ ಪ್ರದೇಶದಲ್ಲಿ ಪರಿಶೀಲನೆ ನಡೆಸಲೆಂದು ಹೋಗಿದ್ದ ಅಧಿಕಾರಿಗಳು ತುಂಬಿ ಹರಿಯುತ್ತಿದ್ದ ಸೇತುವೆ ಮಧ್ಯೆ ಸಿಲುಕಿ ಪರದಾಡಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭೀಮಾನದಿ ಪಾತ್ರಕ್ಕೆ ಪರಿಶೀಲನೆಗೆಂದು ಅಧಿಕಾರಿಗಳು ತೆರಳುತ್ತಿದ್ದರು. ಭೀಮಾನದಿ ಅಬ್ಬರಕೆ ಸೇತುವೆಯಲ್ಲಿ ನೀರು ನಿಂತಿದೆ.
ಸೇತುವೆ ಮೇಲೆ ನಿಂತ ನೀರಿನಲ್ಲಿಯೇ ಜನರು ವಾಹನ ಚಲಾಯಿಸಿಕೊಂಡು ಹೋಗಬೇಕಾದ ಅನಿವಾರ್ಯ. ಅಂತೆಯೇ ಅಧಿಕಾರಿಗಳು ಕೂಡ ಸಾಗಿದ್ದಾರೆ. ಈ ವೇಳೆ ನೀರು ವಾಹನದೊಳಗೆ ನುಗ್ಗಿ ಸೇತುವೆ ಮಧ್ಯೆಯೇ ಅಧಿಕಾರಿಗಳ ವಾಹನ ಕೆಟ್ಟು ನಿಂತಿದೆ. ಸೇತುವೆ ಮೇಲೆ ಹರಿಯುತ್ತಿದ್ದ ನಿರಿನಲ್ಲಿಯೇ ಅಧಿಕಾರಿಗಳು ಲಾಕ್ ಆಗಿದ್ದಾರೆ. ವಾಹನ ಕೈಕೊಟ್ಟ ಪರಿಣಾಮ ಅಧಿಕಾರಿಗಳು ನೀರಿನಲ್ಲಿ ನಡೆದುಕೊಂಡೇ ಸಾಗಿದ ಘಟನೆ ನಡೆದಿದೆ.