HomeKarnatakaBREAKING: ಸೇತುವೆ ತಡೆ ಗೋಡೆಗೆ ಬಡಿದು ನದಿಗೆ ಬಿದ್ದ ಟಿಪ್ಪರ್: ಚಾಲಕ, ಕ್ಲೀನರ್ ಸಾವು

BREAKING: ಸೇತುವೆ ತಡೆ ಗೋಡೆಗೆ ಬಡಿದು ನದಿಗೆ ಬಿದ್ದ ಟಿಪ್ಪರ್: ಚಾಲಕ, ಕ್ಲೀನರ್ ಸಾವು

ವಿಜಯಪುರ: ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಸೇತುವೆಯ ಮೇಲಿಂದ ಟಿಪ್ಪರ್ ಕೆಳಗೆ ಬಿದ್ದು ಚಾಲಕ ಕ್ಲೀನರ್ ಮೃತಪಟ್ಟಿದ್ದಾರೆ.

ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಟಿಪ್ಪರ್ ನದಿಯ ತಟದಲ್ಲಿ ಬಿದ್ದಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೂರು ಕಿಲೋಮೀಟರ್ ಉದ್ದದ ಸೇತುವೆಯ ಮೇಲೆ ಘಟನೆ ನಡೆದಿದೆ.

ಟಿಪ್ಪರ್ ಚಾಲಕ ಸಚಿನ್(32), ಕ್ಲೀನರ್ ಪರಶುರಾಮ(30) ಮೃತಪಟ್ಟವರು. ಇವರಿಬ್ಬರು ಬಸವನಬಾಗೇವಾಡಿ ತಾಲೂಕಿನ ಯಾಳವಾರ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಕೊಲ್ಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular